ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕಾದ ರಾಜತಾಂತ್ರಿಕ ಅಧಿಕಾರಿ ಭಾರತೀಯ ಆಹಾರ ಪರಂಪರೆಗೆ ಮನಸೋತಿದ್ದು, ದಕ್ಷಿಣ ಭಾರತ ಶೈಲಿಯ ಬಾಳೆ ಎಲೆ ಊಟ ಸವಿದು ಮನಸೋತಿದ್ದಾರೆ.
ಈ ಕುರಿತು ಖುದ್ದು ಅವರೇ ಖುಷಿಯಿಂದ ತಿನ್ನುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಚ್ಚಿಕೊಂಡಿದ್ದು, ವೈರಲ್ ಆಗಿದೆ.
ದೆಹಲಿ ಆಗಮಿಸಿದ ಅವರು ತಮಿಳುನಾಡು ಭವನದಲ್ಲಿ ಅಮೆರಿಕನ್ ಅಂಬಾಸಿಡರ್ ಎರಿಕ್ ಗರ್ಸೆಟ್ಟಿ ದಕ್ಷಿಣ ಭಾರತ ಶೈಲಿಯ ಊಟ ಬಾಳೆ ಎಲೆ ಊಟ ಮಾಡಿದ್ದು, ಊಟದ ಕೊನೆಗೆ ಪಾನ್ ತಿನ್ನುತ್ತಿರುವ ವೀಡಿಯೋ ವೈರಲ್ ಆಗಿದೆ.
‘ ವಣಕಂ ಫ್ರಮ್ ತಮಿಳುನಾಡು ಭವನ ದೆಹಲಿ, ಇವತ್ತು ನಾನು ಅದ್ಭುತವಾದ ದಕ್ಷಿಣ ಭಾರತ ಶೈಲಿಯ ಬಾಳೆ ಎಲೆ ಊಟವನ್ನು ಮಾಡಿದೆ. ದಕ್ಷಿಣ ಭಾರತ ಶೈಲಿಯ ಈ ವೈವಿಧ್ಯ ಆಹಾರ ಶೈಲಿಯಿಂದ ನಾನು ಬಹಳ ಖುಷಿಯಾದೆ. ಚೆನ್ನೈ ನೀನು ನನ್ನ ಹೃದಯದಲ್ಲಿರುವೆ ನಾನು ನಿನ್ನನ್ನು ಆದಷ್ಟು ಬೇಗ ಭೇಟಿಯಾಗುವೆ’ ಎಂದು ಅವರು ಬರೆದುಕೊಂಡಿದ್ದಾರೆ.
ತಮಿಳು ಭವನದಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿ ಎಲೆಯಲ್ಲಿದ್ದ ಪ್ರತಿ ತಿನಿಸಿನ ಬಗ್ಗೆಯೂ ವಿವರ ನೀಡಿದ್ದಾರೆ.ಎರಿಕ್ ಅವರು ಪ್ರತಿಯೊಂದು ಆಹಾರದ ಬಗ್ಗೆ ಕುತೂಹಲದಿಂದ ಕೇಳುತ್ತಾ ಅಲ್ಲಿದ್ದ ಎಲ್ಲರ ಜೊತೆ ಮಾತನಾಡುತ್ತಾ ಆ ಕ್ಷಣವನ್ನು ಸಂಭ್ರಮಿಸಿದ್ದಾರೆ.
2.25 ನಿಮಿಷದ ವೀಡಿಯೋದದಲ್ಲಿ ಸ್ಪೂನ್ ಇಲ್ಲ ಏನು ಇಲ್ಲ ಮೊದಲ ಬಾರಿಗೆ ಕೈಯಲ್ಲಿ ಬಾಳೆ ಎಲೆಯ ಊಟ ಮಾಡುತ್ತಿದ್ದೇನೆ. ಇದು ಸ್ವಾದಿಷ್ಟವಾಗಿದೆ. ಚೆನ್ನೈ (Chennai) ನನ್ನ ಹೃದಯದಲ್ಲಿರುತ್ತದೆ. ನಾ ಆದಷ್ಟು ಬೇಗ ಚೆನ್ನೈಗೆ ಬರುವೆ ಎಂದು ಅವರು ವಿಡಿಯೋ ಕೊನೆಗೆ ಹೇಳುತ್ತಾರೆ. ಊಟದ ನಂತರ ಅವರು ಪಾನ್ ಸೇವಿಸುವುದಲ್ಲದೇ ಟೀ ಕುಡಿಯುವ ದೃಶ್ಯವೂ ಮಜಾವಾಗಿದೆ. ಒಟ್ಟಿನಲ್ಲಿ ಭಾರತೀಯ ಆಹಾರ ಪರಂಪರೆಯೂ ನಮ್ಮ ದೇಶದಷ್ಟೇ ವೈವಿಧ್ಯಮಯವಾಗಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಜೊತೆಗೆ ಈ ಆಹಾರ ಶೈಲಿಯನ್ನು ತರಹೇವಾರಿ ತಿನಿಸುಗಳನ್ನು ಇಷ್ಟಪಡದ ಜನರಿಲ್ಲ.
ಇತ್ತೀಚೆಗಷ್ಟೇ ಜಪಾನ್ ರಾಜತಾಂತ್ರಿಕ ಅಧಿಕಾರಿ ಹಿರೋಶಿ ಸುಜುಕಿ ತಮ್ಮ ಪತ್ನಿಯೊಂದಿಗೆ ಭಾರತದ ಬೀದಿ ಬದಿಯ ಆಹಾರಗಳಾದ ವಾಡಾಪಾವ್ ಮಿಲಾಸ್ ಪಾವ್ ಅನ್ನು ಮನಸಾರೆ ಇಷ್ಟಪಟ್ಟು ತಿನ್ನುತ್ತಿರುವ ವೀಡಿಯೋ ವೈರಲ್ ಆಗಿತ್ತು, ಇದಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆ ಸೂಚಿಸಿದ್ದರು.