ನಂದಿನಿ ಹಾಲಿನ ಗುಣಮಟ್ಟ ಕಳಪೆ, ಮಿಲ್ಮ ಬಳಸಿ: ಕೇರಳ ಸಚಿವೆ ಕರೆಗೆ ಶುರುವಾಗಿದೆ ಟೀಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳ -ಕರ್ನಾಟಕ ನಡುವೆ ಕೆಲವು ದಿನಗಳಿಂದ ನಂದಿನಿ ಹಾಲಿನ (KMF) ಉತ್ಪನ್ನ ಕುರಿತು ಅಪಸ್ವರ ಶುರುವಾಗಿದ್ದು, ಇದೀಗ ನಂದಿನಿ ಹಾಲಿನ ಉತ್ಪನ್ನಗಳ ಗುಣಮಟ್ಟ ಕಳಪೆಯಾಗಿದೆ ಎಂದು ಕೇರಳ ಪಶು ಸಂಗೋಪನೆ ಸಚಿವೆ (Nandini VS Milma) ಜೆ ಚಿಂಚು ರಾಣಿ ಹೇಳಿದ್ದಾರೆ.

ಕರ್ನಾಟಕ ಹಾಲು ಒಕ್ಕೂಟವು (KMF) ಕೇರಳ ಪ್ರವೇಶಿಸುವ ಮುನ್ನ ಅನುಮತಿ ಪಡೆಯಬೇಕಿತ್ತು. ಈ ಕುರಿತು ನಾವು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಗೆ ದೂರು ನೀಡುತ್ತೇವೆ. ಹಾಗೆಯೇ, ನಂದಿನಿ ಹಾಲಿನ ಗುಣಮಟ್ಟ ಕಳಪೆಯಾಗಿದೆ. ಕೇರಳ ನಾಗರಿಕರು ಮಿಲ್ಮ ಡೇರಿ ಉತ್ಪನ್ನಗಳನ್ನೇ ಬಳಸಬೇಕು ಎಂದು ಹೇಳಿದ್ದಾರೆ. ಇದೀಗ ಇವರ ಹೇಳಿಕೆಗೆ ಕರ್ನಾಟಕದಲ್ಲಿ ವ್ಯಾಪಕ ಟೀಕೆಗಳು ಕೇಳಿಬರುತ್ತಿದೆ.

ಮಿಲ್ಮ ಮಲಬಾರ್‌ ಪ್ರಾದೇಶಿಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಎಸ್.‌ ಮಣಿ ಕೆಲ ದಿನಗಳ ಹಿಂದಷ್ಟೇ ದೇಶದಲ್ಲಿ ಹಾಲಿನ ಒಕ್ಕೂಟಗಳು ಇದುವರೆಗೆ ಪಾಲಿಸಿಕೊಂಡು ಬರುತ್ತಿದ್ದ ಕೆಲಸ ನಿಯಮಗಳನ್ನು ಮುರಿಯುತ್ತಿವೆ. ಕರ್ನಾಟಕದಲ್ಲಿ ಅಮುಲ್‌ಗೆ ವಿರೋಧ ವ್ಯಕ್ತವಾಗುವ ಮೊದಲೇ ಕೇರಳದಲ್ಲಿ ಮಿಲ್ಮ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲು ತೀರ್ಮಾನಿಸಲಾಗಿತ್ತು. ಕೇರಳದಲ್ಲಿ ಕರ್ನಾಟಕದ ಹಾಲಿನ ಮಳಿಗೆ ಸ್ಥಾಪಿಸಲು ಮೊದಲೇ ವಿರೋಧಿಸಿ ಪತ್ರ ಬರೆದಿದ್ದೆವು. ಕರ್ನಾಟದಲ್ಲಿ ಬ್ಯುಸಿನೆಸ್‌ ಮಾಡಲು ಮುಂದಾದ ಅಮುಲ್‌ ನಿರ್ಧಾರ ಸರಿಯಲ್ಲ. ಹಾಗಂತ, ಅಮುಲ್‌ಗೆ ವಿರೋಧ ವ್ಯಕ್ತಪಡಿಸುವ ಯಾವ ನೈತಿಕತೆಯೂ ನಂದಿನಿಗಿಲ್ಲ ಎಂದು ಹೇಳಿದ್ದಾರೆ.

ಹೀಗಾಗಿ ಕೇರಳದಲ್ಲಿ ಕರ್ನಾಟಕದ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟವನ್ನು ವಿರೋಧಿಸಲು ಕೇರಳ ಕೋಆಪರೇಟಿವ್‌ ಮಿಲ್‌ ಮಾರ್ಕೆಟಿಂಗ್‌ ಫೆಡರೇಷನ್‌ (Milma-ಮಿಲ್ಮ) ತೀರ್ಮಾನಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!