ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಅಬಕಾರಿ ಸಚಿವ ಸೇಂಥಿಲ್ ಬಾಲಾಜಿ (Senthil Balaji) ಬಂಧನದ ಬೆನ್ನಲ್ಲೇ ಸಹೋದರ ಅಶೋಕ್ ಕುಮಾರ್ (Ashok Kumar) ಗೆಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ.
ಉದ್ಯೋಗ ಹಗರಣದ ಆರೋಪದ ಮೇಲೆ ಅಧಿಕಾರಿಗಳು ಸಮನ್ಸ್ ಜಾರಿ ಮಾಡಲಾಗಿದೆ.
ಮಂಗಳವಾರ ಬೆಳಗ್ಗೆ ಅಬಕಾರಿ ಮತ್ತು ಇಂಧನ ಸಚಿವರಾಗಿದ್ದ ಸೇಂಥಿಲ್ ಬಾಲಾಜಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಈ ವೇಳೆ ಹೈಡ್ರಾಮವೇ ನಡೆದಿತ್ತು. ಬಳಿಕ ಆ ಸ್ಪತ್ರೆಗೆ ಸೇರಿಸಲಾಗಿತ್ತು, ಸೇಂಥಿಲ್ ಅವರನ್ನು ಪರೀಕ್ಷಿಸಿದ ಬಳಿಕ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರು ಮೆಡಿಕಲ್ ಬುಲೆಟಿನ್ ಪ್ರಕಟಿಸಿದ್ದಾರೆ.