ನಿಮ್ಮ ಆಧಾರ್ ಕಾರ್ಡ್ ಅಪ್ ಡೇಟ್ ಆಗಿಲ್ಲವೇ? ಚಿಂತೆ ಬೇಡ, ಮತ್ತೆ ಆಗಿದೆ 3 ತಿಂಗಳು ಅವಧಿ ವಿಸ್ತರಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ ಡೇಟ್ ಮಾಡಲು ನೀಡಿದ್ದ ಜೂನ್ 14 ಕೊನೆಯ ದಿನಾಂಕ ಮುಗಿದಿದ್ದು, ಈ ಹಿನ್ನೆಲೆ ಮತ್ತೆ ಸೆಪ್ಟೆಂಬರ್ 14 ರವರೆಗೆ ಈ ಅವಧಿಯನ್ನು ವಿಸ್ತರಿಸಲಾಗಿದೆ.

ಹೀಗಾಗಿ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ಆನ್ಲೈನ್ನಲ್ಲಿ ಉಚಿತವಾಗಿ ಸೆಪ್ಟೆಂಬರ್ 14 ರವರೆಗೆ ನವೀಕರಿಸಬಹುದು ಮತ್ತು ಅಪ್ಲೋಡ್ ಮಾಡಬಹುದು.

ಕಳೆದ 10 ವರ್ಷಗಳಲ್ಲಿ ಒಮ್ಮೆಯೂ ಆಧಾರ್ ಅನ್ನು ನವೀಕರಿಸದ ಜನರಿಗೆ ಆಧಾರ್ ಅಪ್ ಡೇಟ್ ಕಡ್ಡಾಯವಾಗಿದ್ದು,. ಇದಕ್ಕಾಗಿ, ಯುಐಡಿಎಐ ತನ್ನ ಉಚಿತ ನವೀಕರಣದ ಕೊನೆಯ ದಿನಾಂಕವನ್ನು ಮತ್ತೆ ವಿಸ್ತರಿಸಿದೆ.

ಹೇಗೆ ಮಾಡುವುದು ?
https://myaadhaar.uidai.gov.in/ ಗೆ ಭೇಟಿ ನೀಡಿ ವಿಳಾಸವನ್ನು ನವೀಕರಿಸಲು ಕ್ಲಿಕ್ ಮಾಡಿ.

ನಂತರ ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆಬಂದ OTP ಬಳಸಿ ಡಾಕ್ಯುಮೆಂಟ್ ಅಪ್ಡೇಟ್ ಆಯ್ಕೆಯನ್ನು ಆಯ್ಕೆ ಮಾಡಿ ಮತ್ತು ಅದರ ನಂತರ ಸ್ಕ್ರೀನ್ನಲ್ಲಿ ವಿಳಾಸ ಕಾಣಿಸಿಕೊಳ್ಳುತ್ತದೆ.

ಇದರ ನಂತರ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ವಿವರಗಳನ್ನು ಪರಿಶೀಲಿಸಿ ಸರಿಯಾಗಿದ್ದರೆ, ನೀವು ಮುಂದಿನ ಲಿಂಕ್ ಅನ್ನು ಕ್ಲಿಕ್ ಮಾಡಿ.

ನಂತರ, ನೀವು ವಿಳಾಸ ಹಾಗೂ ನಿಮ್ಮ ಹೆಸರು, ದಾಖಲೆಯನ್ನು ಸಲ್ಲಿಸಬೇಕು.

ಎಲ್ಲಾ ಮಾಹಿತಿಯನ್ನು ನೀಡಿದ ನಂತರ, ಸಲ್ಲಿಸು(Submit) ಬಟನ್ ಮೇಲೆ ಕ್ಲಿಕ್ ಮಾಡಿದರೆ ಆಯ್ತು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಪ್ರಕ್ರಿಯೆ ಯಶಸ್ವಿಯಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!