ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ 2023ಕ್ಕೆ ಎಂಟು ತಂಡಗಳು ನಿರ್ಣಯ ಆಗಿದ್ದು, ಎರಡು ತಂಡಗಳು 9 ಮತ್ತು 10ನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಇದಕ್ಕಾಗಿ ಜಿಂಬಾಬ್ವೆಯಲ್ಲಿ 10 ತಂಡಗಳು ಪೈಪೋಟಿಗೆ ಇಳಿಯಲಿದೆ. 2023ರ ವಿಶ್ವಕಪ್ಗಾಗಿ ನಾಳೆಯಿಂದ ಅರ್ಹತಾ ಪಂದ್ಯ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಮತ್ತು ನೇಪಾಳ ಮುಖಾಮುಖಿಯಾಗಲಿವೆ.
ಐದು ತಂಡಗಳ ‘ಎ’ ಮತ್ತು ‘ಬಿ’ ಗುಂಪುಗಳನ್ನು ಮಾಡಲಾಗಿದೆ. ಎ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಜಿಂಬಾಬ್ವೆ, ನೆದರ್ಲ್ಯಾಂಡ್, ನೇಪಾಳ ಮತ್ತು ಅಮೆರಿಕಾ ಆಡಲಿದೆ. ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಐರ್ಲೆಂಡ್ ಸ್ಕಾಟ್ಲ್ಯಾಂಡ್, ಒಮನ್ ಮತ್ತು ಯುಎಇ ಸ್ಪರ್ಧಿಸಲಿವೆ. ವಿಶ್ವ ಕಪ್ ಗೆದ್ದ ತಂಡಗಳಾದ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ಗೆ ಈ ಬಾರಿ ಕಠಿಣ ಸವಾಲಿರುವುದಂತೂ ಖಂಡಿತ. ಜಿಂಬಾಬ್ವೆ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅದರ ಜೊತೆಗೆ ತವರು ಮೈದಾನದಲ್ಲಿ ಪಂದ್ಯಗಳನ್ನು ಆಡುತ್ತಿರುವುದು ತಂಡದ ಮೇಲೆ ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.
ವಿಶ್ವಕಪ್ನ ಅರ್ಹತಾ ಪಂದ್ಯಾವಳಿಯ ವೇಳಾಪಟ್ಟಿ
2023ರ ಜೂನ್ 18ರಿಂದ ಜೂನ್ 27ರ ವರೆಗೆ ಏಕ ಮುಖಾಮುಖಿಯ ಲೀಗ್ ಪಂದ್ಯಗಳು ನಡೆಯಲಿದ್ದು, ಜೂನ್ 29ರ ನಂತರ ಸೂಪರ್ ಸಿಕ್ಸ್, ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳು ನಡೆಯಲಿದೆ. ಫೈನಲ್ ಪಂದ್ಯ ಜುಲೈ 9 ಭಾನುವಾರ ನಡೆಯಲಿದೆ. ಇದರಲ್ಲಿ ಅಂತಿಮವಾಗಿ ಆಡುವ ಎರಡು ತಂಡಗಳು ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ.