ಮಹಿಳೆಯರ ‘ಶಕ್ತಿ’ ಗೆ ಮುರಿದು ಕೈಗೆ ಬಂತು ಸರ್ಕಾರಿ ಬಸ್​ ನ ಡೋರ್​!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ ಜೂ.11 ರಂದು ನಾನ್​ ಎಸಿ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಅಂದಿನಿಂದ-ಇಂದಿನವರೆಗು ನಾನ್​ ಎಸಿ ಬಸ್​ಗಳು ಫುಲ್​ ರಶ್​ ಆಗಿವೆ. ಉಚಿತ ಪ್ರಯಾಣ ಹಿನ್ನೆಲೆ ಮಹಿಳೆಯರು ದೇಗುಲ ಹಾಗೂ ಇನ್ನೀತರ ಸ್ಥಳಕ್ಕೆ ತೆರಳುತ್ತಿದ್ದು, ಬಸ್​ ಫುಲ್​ ಆಗಿವೆ. ಹೀಗೆ ರಶ್​ ಆದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ​ ನಾ ಮುಂದು ತಾ ಮುಂದು ಎಂದು ಬಸ್​​ ​ಹತ್ತುವಾಗ ಮಹಿಳಾ ಮಣಿಗಳು ಶಕ್ತಿ ಪ್ರದರ್ಶನ ಮಾಡಿದ್ದು, ಬಸ್​​ ಬಾಗಿಲನ್ನೇ ಮುರಿದು ಹಾಕಿದ್ದಾರೆ.

ಹೌದು ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಮಲೈ ಮಹದೇಶ್ವರ ಬೆಟ್ಟದತ್ತ ಮಹಿಳೆಯರು ಹೊರಟಿದ್ದು, ಕೊಳ್ಳೇಗಾಲದಲ್ಲಿ ಮಹಿಳೆಯರು ನೂಕು ನುಗ್ಗಲಿನಿಂದ ಜಿದ್ದಿಗೆ ಬಿದ್ದು ಬಸ್ ಹತ್ತಲು ಹೋಗಿ ಬಾಗಿಲನ್ನೇ ಮುರಿದು ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!