ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಹೆಚ್ಚು ವೃತ್ತಿಪರತೆಯಿಂದ ಕಾರ್ಯ ಎಸಗುವಿರಿ. ಅದರಿಂದ ಎಲ್ಲವೂ ಸಲೀಸಾಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮ. ಆಪ್ತಬಂಧುವಿನ ಜತೆ ಹರ್ಷೋಲ್ಲಾಸ.
ವೃಷಭ
ಕೌಟುಂಬಿಕ ಬದುಕು ಸೌಹಾರ್ದಯುತ ಮತ್ತು ಶಾಂತಿಯುತ. ಖಾಸಗಿ ವಲಯದ ಕೆಲಸಗಾರರಿಗೆ ಅಧಿಕ ಕಾರ್ಯದೊತ್ತಡ. ಬಂಧುಗಳ ಭೇಟಿ.
ಮಿಥುನ
ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ಸೌಹಾರ್ದ ಕೆಡಿಸುವ ಮಾತು, ವರ್ತನೆ ಮಾಡದಿರಿ. ಹೊಂದಾಣಿಕೆಯಿಂದ ನಡಕೊಳ್ಳಿ.
ಕಟಕ
ಕೌಟುಂಬಿಕ ಸಮ್ಮಿಲನ. ಆದರೆ ಕೆಲವರು ಸೌಹಾರ್ದತೆ ಕೆಡಿಸಲು ಯತ್ನಿಸಬಹುದು. ಪ್ರೀತಿಯ ವಿಷಯದಲ್ಲಿ ಪ್ರತಿಕೂಲ ಬೆಳವಣಿಗೆ. ಸಹನೆ ಕಾಯ್ದುಕೊಳ್ಳಿ.
ಸಿಂಹ
ಎಲ್ಲ ಕೆಲಸವನ್ನು ಸಕಾಲದಲ್ಲಿ ಮುಗಿಸಿ. ಇಲ್ಲವಾದರೆ ಹೊರೆ ಹೆಚ್ಚುವುದು. ಅಪೇಕ್ಷಿತ ಸಹಕಾರ ದೊರಕದು. ಮನೆಯಲ್ಲಿ ವಾಗ್ವಾದ ನಡೆದೀತು.
ಕನ್ಯಾ
ಹೊರಗಿನ ವ್ಯವಹಾರ ಮುಖ್ಯ ನಿಜ, ಆದರೆ ಕುಟುಂಬವನ್ನು ಕಡೆಗಣಿಸಬೇಡಿ. ಅವರ ಹಿತಾಸಕ್ತಿಗೂ ಗಮನ ಕೊಡಿ. ಖರ್ಚು ತುಸು ಹೆಚ್ಚಾದೀತು.
ತುಲಾ
ಪ್ರೀತಿ ಮತ್ತು ವೃತ್ತಿಯಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಸ್ನೇಹ ಸಂಬಂಧ ವೃದ್ಧಿ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ. ಆದಾಯದಲ್ಲಿ ಏರುಗತಿ.
ವೃಶ್ಚಿಕ
ಕೆಲವರ ಕುರಿತಾದ ಹುಸಿನಂಬಿಕೆ ತ್ಯಜಿಸಿ. ಪ್ರಾಮಾಣಿಕ ಸಂಬಂಧ ಬೆಳೆಸಿ. ಧಾರ್ಮಿಕ ವಿಚಾರಗಳು ಹೆಚ್ಚು ಆಸಕ್ತಿ ಕೆರಳಿಸಬಹುದು. ಆರೋಗ್ಯ ಸಮಸ್ಯೆ.
ಧನು
ಕೆಲವು ವಿಷಯಗಳ ಕುರಿತು ಅತಿರೇಕದ ಚಿಂತನೆ ಮಾಡದಿರಿ. ಬದುಕನ್ನು ಇದ್ದಂತೆಯೆ ಸ್ವೀಕರಿಸಿರಿ. ಅದರಿಂದಲೇ ನೆಮ್ಮದಿ ಸಿಗುವುದು.
ಮಕರ
ದಿನವಿಡೀ ಕಾರ್ಯವ್ಯಸ್ತ. ಸಂಜೆ ವೇಳೆಗೆ ಆಯಾಸ ಕಾಡಬಹುದು. ನಿಮ್ಮ ವೈಯಕ್ತಿಕ ಹಿತಾಸಕ್ತಿಗೆ ಆದ್ಯ ಗಮನ ಕೊಡಿ. ಆರ್ಥಿಕ ಬಿಕ್ಕಟ್ಟು.
ಕುಂಭ
ಹಣದ ವಿಷಯದಲ್ಲಿ ನಿರಾಶೆ ಉಂಟಾದೀತು. ಕೆಲವು ನಿರೀಕ್ಷೆಗಳು ಈಡೇರುವುದಿಲ್ಲ. ಆರೋಗ್ಯಕರ ಆಹಾರವನ್ನಷ್ಟೇ ಸ್ವೀಕರಿಸಿರಿ.
ಮೀನ
ನಿಮ್ಮ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸಿ. ಇಲ್ಲವಾದರೆ ಕಷ್ಟಕ್ಕೆ ಸಿಲುಕುವಿರಿ. ಇತರರ ಮೇಲೆ ಅವಲಂಬನೆ ಬಿಟ್ಟುಬಿಡಿ.