VIRAL VIDEO| ನ್ಯಾಯಾಲಯದಲ್ಲೇ ನಾರಿಯರ ಮಾರಾಮಾರಿ: ವಕೀಲರು ಕಕ್ಕಾಬಿಕ್ಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾರನ್ನು ಬೇಕಾದರೂ ತಡೆಯಬಹುದು..ಆದರೆ, ನಾರಿಯರ ನಡುವೆ ಪಂಚಾಯ್ತಿ ಮಾಡಲು ಹೋದರೆ ನಿಮ್ಮ ಪ್ರಾಣಕ್ಕೆ ಕುತ್ತು ಬರುತ್ತೆ ಅನ್ನೋದು ನೆನಪಿರಲಿ. ಅಂಥದ್ದೇ ಘಟನೆ ಮಹಿಳೆಯರು ಕೋರ್ಟ್‌ನಲ್ಲಿ ಪರಸ್ಪರ ಹೊಡೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಮಹಿಳೆಯರನ್ನು ತಡೆಯಲು ಯತ್ನಿಸಿದ ವಕೀಲರನ್ನು ಥಳಿಸುವ ಪ್ರಯತ್ನವನ್ನೂ ಈ ವಿಡಿಯೋದಲ್ಲಿ ನೋಡಬಹುದು. ಲಕ್ನೋ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆಗೆ ಎರಡೂ ಬಣಗಳ ಜನರು ಬಂದಿದ್ದರು. ಮತ್ತು ಆ ನ್ಯಾಯಾಲಯದ ತೀರ್ಪು ಏನಾಯಿತೋ ಗೊತ್ತಿಲ್ಲ ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದ ಮಹಿಳೆಯರೆಲ್ಲರೂ ನ್ಯಾಯಾಲಯದ ಹಾಲ್‌ನಲ್ಲಿ ದೊಡ್ಡ ಸಮರವನ್ನೇ ಸಾರಿದ್ದರು.

ಕೆಲವು ವಕೀಲರು ಅವರನ್ನು ತಡೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇದಲ್ಲದೆ, ವಕೀಲರೊಬ್ಬರನ್ನು ಸಹ ಮಹಿಳೆಯರು ಥಳಿಸಿದ್ದಾರೆ. ಚಪ್ಪಲಿಯಿಂದ ಹೊಡೆದು, ಕಾಲುಗಳಿಂದ ಒದೆಯುತ್ತಾ ಕೋರ್ಟ್‌ ಹಾಲ್‌ಅನ್ನು ರಣರಂಗ ಮಾಡಿಬಿಟ್ಟರು. ಕೋರ್ಟ್‌ನಲ್ಲಿದ್ದ ಕೆಲವರು ಈ ದೃಶ್ಯವನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!