ಸಂಪರ್ಕ್​ ಸೆ ಸಮರ್ಥನ್ ಅಭಿಯಾನ: ಪ್ರಧಾನಿ ಮೋದಿ ಜೊತೆ ಸಂವಾದ ನಡೆಸಲು ಕಾರ್ಯಕರ್ತರಿಗೆ ಅವಕಾಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಂಪರ್ಕ್​ ಸೆ ಸಮರ್ಥನ್ ಅಭಿಯಾನದ ಭಾಗವಾಗಿ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಜೂನ್ 27 ರಂದು ಸಂವಾದ ನಡೆಸುವ ಅವಕಾಶ ಸಿಗಲಿದ್ದು, ಇದಕ್ಕಾಗಿ ಫಲಾನುಭವಿಗಳ ಜೊತೆ ಹೆಚ್ಚಿನ ವಿಡಿಯೋ ಅಥವಾ ಸೆಲ್ಫಿ ತೆಗೆದು ಕಳುಹಿಸಬೇಕು. ಈ ಬಗ್ಗೆ ಬಿಜೆಪಿ ಕರ್ನಾಟಕವು ಪೋಸ್ಟರ್ ಹಂಚಿಕೊಂಡಿದೆ.

ನನ್ನ ಬೂತ್ ಎಲ್ಲಕ್ಕಿಂತಲೂ ಬಲಿಷ್ಠ ಬೂತ್ ಎಂಬ ಹೆಸರಿನಲ್ಲಿ ಬಿಜೆಪಿ ಹಂಚಿಕೊಂಡ ಪೋಸ್ಟರ್​ನಲ್ಲಿ ಇರುವಂತೆ, ಪ್ರಧಾನಮಂತ್ರಿ ಅವರು ಪಕ್ಷದ 10 ಲಕ್ಷ ಬೂತ್​ಗಳಲ್ಲಿನ ಲಕ್ಷಾಂತರ ಕಾರ್ಯಕರ್ತರೊಂದಿಗೆ ಜೂ. 27 ರಂದು ಸಂವಾದ ನಡೆಸಲಿದ್ದಾರೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳ ವಿಡಿಯೋ ಅಥವಾ ಸೆಲ್ಫಿ ತರುವ ಕಾರ್ಯಕರ್ತರಿಗೆ ಮೋದಿ ಅವರೊಂದಿಗೆ ಸಂವಾದ ನಡೆಸುವ ಅವಕಾಶ ಸಿಗಲಿದೆ.

ಈ ಮೂರು ಟಾಸ್ಕ್ ಪೂರ್ಣಗೊಳಿಸಬೇಕು
ಹರ್​ಘರ್ ವಿಕಾಸ್ ಫಲಾನುಭವಿಗಳ ಜೊತೆ ಸೆಲ್ಫಿ ತೆಗೆದು ಅಪ್​ಲೋಡ್ ಮಾಡಬೇಕು, ಸಂಪರ್ಕ್ ಸೆ ಸಮರ್ಥನ್: ಕ್ಷೇತ್ರದ ಗಣ್ಯ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿ ಫೋಟೋ ಅಪ್ಲೋಡ್ ಮಾಡಬೇಕು , ಬದಲಾಗುತ್ತಿರುವ ಭಾರತದ ಮಾತು: ಫಲಾನುಭವಿಗಳ ವಿಡಿಯೋ ಅಪ್ಲೋಡ್ ಮಾಡಬೇಕು
NAMO App ಮೂಲಕ ಈ ಮೂರು ಟಾಸ್ಕ್​ಗಳನ್ನು ಪೂರ್ಣಗೊಳಿಸಬೇಕು ಎಂದು ಬಿಜೆಪಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!