ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ನಿಮ್ಮ ಮಾತು, ವರ್ತನೆ ಇತರರ ಮೇಲೆ ಪರಿಣಾಮ ಬೀರಬಹುದು. ಆಪ್ತರ ಮನಸ್ಸು ನೋಯಿಸಲು ಅವಕಾಶ ಕೊಡದಿರಿ. ಸಹನೆಯಿರಲಿ.
ವೃಷಭ
ದುಡುಕಿನ ಮಾತು ಕುಟುಂಬ ಸದಸ್ಯರ ಜತೆ ವಿರಸ ಮೂಡಿಸದಂತೆ ಎಚ್ಚರ ವಹಿಸಿ. ಕಾಡುವ ಚಿಂತೆಯೊಂದು ಪರಿಹಾರ ಕಾಣುವುದು. ಆರ್ಥಿಕ ಉನ್ನತಿ.
ಮಿಥುನ
ವ್ಯವಹಾರದಲ್ಲಿ ಒಂದೇ ಬಾರಿ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡದಿರಿ. ಅದು ನಿರೀಕ್ಷಿತ ಫಲ ನೀಡಲಾರದು. ಕೌಟುಂಬಿಕ ಉದ್ವಿಗ್ನತೆ.
ಕಟಕ
ಇಂದು ಹಣದ ವಿಷಯದಲ್ಲಿ ಎಚ್ಚರದಿಂದ ವ್ಯವಹರಿಸಿರಿ. ನಷ್ಟ ಸಂಭವಿಸಬಹುದು.ಎಲ್ಲರ ಜತೆ ಹೊಂದಾಣಿಕೆಯಿರಲಿ.
ಸಿಂಹ
ನಿಮ್ಮ ಮೇಲೆ ಪರಿಣಾಮ ಬೀರುವ ಕೆಲವು ಬದಲಾವಣೆ ಸುತ್ತಮುತ್ತ ಸಂಭವಿಸುವುದು. ಅದನ್ನು ವಿರೋಧಿಸುವ ಬದಲು ಹೊಂದಾಣಿಕೆ ಒಳ್ಳೆಯದು.
ಕನ್ಯಾ
ಆಪ್ತ ಬಂಧುಗಳ ಜತೆ ಹೆಚ್ಚು ಆತ್ಮೀಯವಾಗಿ ವರ್ತಿಸಿರಿ. ಅವರನ್ನು ನೋಯಿಸಲು ಹೋಗಬೇಡಿ. ಕೆಲವರ ವರ್ತನೆ ಸಹಿಸಬೇಕಾದ ಅನಿವಾರ್ಯತೆ.
ತುಲಾ
ಕುಟುಂಬದಲ್ಲಿ ಹಿರಿಯ ವ್ಯಕ್ತಿಗಳ ಜತೆ ವಿಧೇಯರಾಗಿರಿ. ಅಸಮಾಧಾನ ವ್ಯಕ್ತಪಡಿಸಬೇಡಿ. ಉದ್ಯೋಗದಲ್ಲಿ ಏರುಪೇರು.
ವೃಶ್ಚಿಕ
ಸಂಕಷ್ಟ ಹಾಗೂ ಮಾನಸಿಕ ಅಶಾಂತಿ ನಿವಾರಣೆ. ಪ್ರತಿಕೂಲವಾಗಿದ್ದ ಪರಿಸ್ಥಿತಿ ನಿಮ್ಮ ಪರವಾಗಿ ತಿರುಗುವುದು. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು.
ಧನು
ಇಂದು ಎಲ್ಲ ಕಾರ್ಯ ಕಠಿಣವಾಗಿ ತೋರುವುದು. ಸಾಲ ಹೆಚ್ಚು. ಆದರೂ ಅಂತಿಮವಾಗಿ ನಿಮಗೆ ಉತ್ತಮ ಫಲ ದೊರಕುವುದು.
ಮಕರ
ಆತ್ಮೀಯ ಸಂಬಂಧ ಕೆಡಿಸಲು ಹೋಗದಿರಿ. ಇತರರ ಮೇಲೆ ಆರೋಪ ಹೊರಿಸುವ ಮೊದಲು ನಿಮ್ಮನ್ನು ಪರಾಮರ್ಶಿಸಿಕೊಳ್ಳಿ, ತಿದ್ದಿಕೊಳ್ಳಿ.
ಕುಂಭ
ನಿಮ್ಮ ಭಾವನೆಯನ್ನು ಹಂಚಿಕೊಳ್ಳಲು ಹಿಂದೆ ಮುಂದೆ ನೋಡಬೇಡಿ. ಅವರಿಂದ ಸೂಕ್ತ ಸ್ಪಂದನೆ ದೊರಕಬಹುದು. ಕೌಟುಂಬಿಕ ಉದ್ವಿಗ್ನತೆ ಮಾಯವಾಗುವುದು.
ಮೀನ
ಮಾಡಬೇಕಾದ ಕಾರ್ಯ ಇಂದೇ ಮಾಡಿ. ಯಾವುದೇ ಕೆಲಸ ಬಾಕಿ ಇಡಬೇಡಿ. ಕುಟುಂಬ ಸದಸ್ಯರಿಂದ ಸಹಕಾರ ಪಡೆಯುವಿರಿ. ಆರ್ಥಿಕ ಸುಧಾರಣೆ.