ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ಶೂಟೌಟ್ ಪ್ರಕರಣಗಳಿಗೆ ಎಲ್ಲೆಯೇ ಇಲ್ಲದಂತಾಗಿದೆ. ವಾಷಿಂಗ್ಟನ್ನ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕಲ್ ಫೆಸ್ಟಿವಲ್ ವೇಳೆ ಸಾಮೂಹಿಕ ಗುಂಡಿನ ದಾಳಿ ಮಾಡಲಾಗಿದ್ದು, ಇಬ್ಬರು ಬಲಿಯಾಗಿದ್ದಾರೆ.
ಜಾರ್ಜ್ ಸಿಟಿ ಸಮೀಪದ ಕ್ಯಾಂಪ್ ಗ್ರೌಂಡ್ನಲ್ಲಿ ಸಾಮೂಹಿಕ ದಾಳಿ ನಡೆದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮ್ಯೂಸಿಕ್ ಫೆಸ್ಟಿವಲ್ಗೆ ಬಂದ ಶೂಟರ್ ಆಂಪಿಥಿಯೇಟರ್ನಲ್ಲಿ ನಿಂತುಕೊಂಡು ಏಕಾಏಕಿ ಸಿಕ್ಕಸಿಕ್ಕವರಿಗೆ ಗುಂಡು ಹಾರಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಆಗಮಿಸಿದ ಬಳಿಕವೂ ಗುಂಡಿನ ದಾಳಿಯನ್ನು ಆತ ಮುಂದುವರಿಸಿದ್ದಾರೆ. ಬಿಯಾಂಡ್ ವಂಡರ್ಲ್ಯಾಂಡ್ ಕಾರ್ಯಕ್ರಮಕ್ಕೆ ಬಂದು ಗುಂಡಿನ ದಾಳಿ ಮಾಡುವ ಬಗ್ಗೆ ಆತ ಪ್ರೀ ಪ್ಲ್ಯಾನ್ ಮಾಡಿಕೊಂಡು ಬಂದಿದ್ದ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.