ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ಗೆ ಭೀಕರ ಬಿಪರ್‌ಜೊಯ್ ಚಂಡಮಾರುತ ಅಪ್ಪಳಿಸಿದ್ದು, ಈ ವೇಳೆ 707 ಮಹಿಳೆಯರಿಗೆ ಹೆರಿಗೆಯಾಗಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಚಂಡಮಾರುತದ ಭೀತಿಯಿಂದಾಗಿ ಗರ್ಭಿಣಿಯರನ್ನು ಸುರಕ್ಷಿತ ತಾಣಗಳಿಗೆ ಮೊದಲೇ ಕಳುಹಿಸಲಾಗಿತ್ತು. ಒಟ್ಟಾರೆ 1,206ಗರ್ಭಿಣಿಯರನ್ನು ಆರೋಗ್ಯ ಕೇಂದ್ರಗಳಿಗೆ ಕಳುಹಿಸಿದ್ದು, ಇವರಿಲ್ಲಿ 707 ಮಂದಿಗೆ ಹೆರಿಯಾಗಿದೆ ಎಂದು ತಿಳಿಸಿದೆ.
ಆಂಬುಲೆನ್ಸ್‌ಗಳಿಗೆ ಸದಾ ಸನ್ನದ್ಧರಾಗಿರಲಿ ಸೂಚನೆ ನೀಡಲಾಗಿತ್ತು. ಜೊತೆಗೆ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗಳಿಗೆ ದಾಖಲಿಸಲು 302 ಸರ್ಕಾರಿ ಆಂಬುಲೆನ್ಸ್‌ಗಳನ್ನು ನಿಯೋಜನೆ ಮಾಡಲಾಗಿತ್ತು.