ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಮ್ಮೆ ಪ್ರಾಣಿಗಳ ಬಳಿ ಹೋಗಲು ಭಯಪಡುತ್ತೇವೆ..ಅವು ನಮ್ಮ ಹತ್ತಿರ ಬಾರದಿದ್ದರೂ..ಕಂಡರೆ ಸಾಧ್ಯವಾದಷ್ಟೂ ಓಡಿಹೋಗಲು ಪ್ರಯತ್ನಿಸುತ್ತೇವೆ. ಇನ್ನು ಹುಲಿ ಚಿರತೆ ಮತ್ತು ಸಿಂಹದಂತಹ ಪ್ರಾಣಿಗಳ ಬಗ್ಗೆ ಹೇಳಬೇಕಾಗಿಲ್ಲ. ಆದರೆ, ಹವಾಮಾನ ಬದಲಾವಣೆಯಿಂದ ಅರಣ್ಯ ಪ್ರದೇಶದಿಂದ ಕಾಡು ಪ್ರಾಣಿಗಳು ಕಾಲಕಾಲಕ್ಕೆ ನಾಡಿಗೆ ಬರುತ್ತಿವೆ.
ಹುಡುಗನೊಬ್ಬ ಚಿರತೆಯ ಮರಿಯೊಂದಿಗೆ ಬೆಕ್ಕಿನ ಮರಿಯೆಂದು ತಿಳಿದು ಆಟವಾಡುತ್ತಿದ್ದ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲರೂ ಶಾಕ್ ಆಗಿದ್ದಾರೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯುಪಿ ರಾಜ್ಯದ ಮೀರತ್‌ನ ಶಾಜನ್‌ಪುರದಲ್ಲಿ ಮಾವಿನ ಹಣ್ಣು ತೋಟದಲ್ಲಿ ಹತ್ತರ ಹರೆಯದ ಹುಡುಗನೊಬ್ಬ ಚಿರತೆ ಮರಿಯೊಡನೆ ಆಟವಾಡುತ್ತಿದ್ದ. ಮಾವಿನ ಮರದ ಕೆಳಗೆ ಇದ್ದಾಗ ಬಾಲಕ ಅದನ್ನು ಹಿಡಿಯಲು ಯತ್ನಿಸುತ್ತಿದ್ದ.
ಇದನ್ನು ಗಮನಿಸಿದ ಮಾವಿನ ತೋಟದ ಮಾಲೀಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಪಂದಿಸಿದ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಚಿರತೆ ಮರಿಯನ್ನು ವಶಕ್ಕೆ ಪಡೆದಿದ್ದಾರೆ. ಮಗು ಚಿರತೆಯ ಜೊತೆ ಆಟವಾಡುತ್ತಿದ್ದಾಗ ವಿಡಿಯೋ ತೆಗೆದಿದ್ದು ಯಾರು ಎಂಬುದು ಸ್ಪಷ್ಟವಾಗಿಲ್ಲ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗಿದೆ. ಮಾವಿನ ತೋಪಿನಲ್ಲಿ ಚಿರತೆ ಹುಲಿ ಮಗು ಹೇಗೆ ಬಂತು? ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.