ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಆಲಿಯಾ ಭಟ್ ಇದೀಗ ಹಾಲಿವುಡ್‌ಗೆ ಹಾರಿದ್ದಾರೆ. ಆಲಿಯಾ ಭಟ್ ನಟನೆಯ ಮೊದಲ ಹಾಲಿವುಡ್ ಸಿನಿಮಾ ಹಾರ್ಟ್ ಆಫ್ ಸ್ಟೋನ್ ಟ್ರೇಲರ್ ನಿನ್ನೆಯಷ್ಟೇ ರಿಲೀಸ್ ಆಗಿದ್ದು, ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗಲಿದೆ.
ಸ್ಪೆಷಲ್ ಏನಂದ್ರೆ ಇದೇ ದಿನದಂದು ರಣ್‌ಬೀರ್ ಹಾಗೂ ರಶ್ಮಿಕಾ ನಟನೆಯ ಅನಿಮಲ್ ಸಿನಿಮಾ ಕೂಡ ತೆರೆಕಾಣಲಿದೆ. ಸ್ಟಾರ್ ಜೋಡಿಯ ಸಿನಿಮಾಗಳು ಒಂದೇ ದಿನ ತೆರೆಕಾಣಲಿದ್ದು, ಅಭಿಮಾನಿಗಳಿಗೆ ಡಬಲ್ ಧಮಾಕಾ ಎನ್ನುವಂತಾಗಿದೆ.
ರಣ್‌ಬೀರ್ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಲಿದೆ. ಆಲಿಯಾ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ.