ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೊಪ್ಪು ಬಿಸಿಲಿನ ಶಾಖದಲ್ಲಿ ಬೇಗನೆ ಹಾಳಾಗುತ್ತವೆ. ಅದಕ್ಕೇ ಎಲ್ಲರೂ ಮನೆಗೆ ಬಂದ ತಕ್ಷಣ ಫ್ರಿಡ್ಜ್ ನಲ್ಲಿ ಇಡುತ್ತಾರೆ. ಹಾಗೆ ಹಾಕದಿದ್ದರೆ ತರಕಾರಿ, ಸೊಪ್ಪು ಬಾಡಿ ಹೋಗುತ್ತವೆ. ಅದರಲ್ಲೂ ಕೊತ್ತಂಬರಿ ಸೊಪ್ಪು ನಹುಬೇಗನೆ ತನ್ನ ತಾಜಾತನವನ್ನು ಕಳೆದುಕೊಳ್ಳುತ್ತದೆ. ಅದು ಒಣಗದಂತೆ ಕೆಲ ಸಲಹೆಗಳನ್ನು ಪಾಲಿಸಿ
ಮಾರುಕಟ್ಟೆಯಿಂದ ಮನೆಗೆ ಕೊತ್ತಂಬರಿ ಸೊಪ್ಪನ್ನು ತರುವಾಗ ಮೊದಲು ಲೋಟ ಅಥವಾ ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ಕೊತ್ತಂಬರಿ ಸೊಪ್ಪನ್ನು ಅದ್ದಿ. ಹೀಗೆ ಮಾಡುವುದರಿಂದ ಕೊತ್ತಂಬರಿ ಸೊಪ್ಪು ಒಣಗದೆ ತಾಜಾತನದಿಂದ ಕೂಡಿರುತ್ತದೆ. ಈ ನೀರನ್ನು ಸಸ್ಯಗಳಿಗೆ ನೀರುಣಿಸಲು ಸಹ ಬಳಸಬಹುದು.
ಕೊತ್ತಂಬರಿ ಸೊಪ್ಪನ್ನು ಯಾವಾಗಲೂ ನೆರಳಿನಲ್ಲಿ ಇಡಿ. ತೆರೆದ ಗಾಳಿಯಲ್ಲಿ ಇಡುವುದನ್ನು ತಪ್ಪಿಸಿ. ಮಾರುಕಟ್ಟೆಯಿಂದ ಕೊತ್ತಂಬರಿ ಸೊಪ್ಪನ್ನು ತರುವಾಗ ಗಾಳಿಯಾಡದ ಡಬ್ಬದಲ್ಲಿ ಪ್ಯಾಕ್ ಮಾಡಿ.
ಒದ್ದೆಯಾದ ಟಿಶ್ಯೂ ಪೇಪರ್ ಮೇಲೆ ಕೊತ್ತಂಬರಿ ಸೊಪ್ಪನ್ನು ಇಡಬಹುದು. ಕೊತ್ತಂಬರಿ ಸೊಪ್ಪನ್ನು ಒದ್ದೆಯಾದ ಟಿಶ್ಯೂನಲ್ಲಿ ಸುತ್ತುವ ಮೂಲಕ ಹೆಚ್ಚು ಕಾಲ ತಾಜಾವಾಗಿರಿಸಿಕೊಳ್ಳಿ ಇವೆ ಈ ರೀತಿ ಮಾಡುವುದರಿಂದ ಕೊತ್ತಂಬರಿ ಸೊಪ್ಪು ತಾಜಾವಾಗಿರುತ್ತದೆ. ಕೊತ್ತಂಬರಿ ಸೊಪ್ಪನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು, ಅದನ್ನು ಐಸ್ ನೀರಿನಿಂದ ತೊಳೆಯುವ ಅಭ್ಯಾಸವನ್ನು ಮಾಡಿಕೊಳ್ಳಿ.