ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶನದ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣಾಸುರನಾಗಿ ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರ ಆದಿಪುರುಷ. ಭಾರೀ ನಿರೀಕ್ಷೆಗಳ ನಡುವೆ ಜೂನ್ 16 ರಂದು ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಪ್ರೇಕ್ಷಕರನ್ನು ನಿರಾಸೆಗೊಳಿಸಿತು. ಟ್ರೋಲಿಂಗ್ ಜೊತೆಗೆ ಟೀಕೆ, ನಿಷೇಧಗಳನ್ನೂ ಎದುರಿಸುತ್ತಿದ್ದಾರೆ. ಆದರೂ ಈ ಸಿನಿಮಾದ ಕಲೆಕ್ಷನ್ ಕಡಿಮೆಯಾಗುತ್ತಿಲ್ಲ.
ಮೊದಲ ದಿನವೇ 140 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಚಿತ್ರ ಸಂಚಲನ ಮೂಡಿಸಿದೆ. ಎರಡು ದಿನದಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಮೊದಲ ವಾರಾಂತ್ಯ ಮುಗಿದರೂ ಮೂರನೇ ದಿನವೂ 100 ಕೋಟಿ ಗ್ರಾಸ್ ಕಲೆಕ್ಷನ್ ಪಡೆದಿದೆ.. ಒಟ್ಟಾರೆ 340ಕ್ಕೂ ಹೆಚ್ಚು ಗ್ರಾಸ್ ಕಲೆಕ್ಷನ್ ಪಡೆದು ದಾಖಲೆ ಸೃಷ್ಟಿಸಿದೆ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ ಪಠಾಣ್ ಮೊದಲ ವಾರಾಂತ್ಯದಲ್ಲಿ 313 ಕೋಟಿ ಗಳಿಸಿ ದಾಖಲೆ ನಿರ್ಮಿಸಿತ್ತು. ಇದೀಗ ಆ ದಾಖಲೆಯನ್ನು ಪ್ರಭಾಸ್ ಆದಿಪುರುಷ್ ಮುರಿದಿದೆ.
ಭಾರೀ ಟ್ರೋಲಿಂಗ್, ಟೀಕೆಗಳ ನಡುವೆಯೂ ಸಿನಿಮಾ ಈ ರೇಂಜ್ ಕಲೆಕ್ಷನ್ ಪಡೆದು ಭಾರತದ ದೊಡ್ಡ ಸ್ಟಾರ್ ಶಾರುಖ್ ಸಿನಿಮಾ ಕಲೆಕ್ಷನ್ ಬ್ರೇಕ್ ಮಾಡಿದೆ.. ಇದು ಪ್ರಭಾಸ್ ರೇಂಜ್ ಅಂತ ರೆಬೆಲ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಮೊದಲ ದಿನದ ಕಲೆಕ್ಷನ್ ನೊಂದಿಗೆ ಪ್ರಭಾಸ್ ಹೊಸ ದಾಖಲೆ ಬರೆದಿರುವುದು ಕೂಡ ಗೊತ್ತೇ ಇದೆ. ಬಾಹುಬಲಿ 2, ಸಾಹೋ ಮತ್ತು ಆದಿಪುರುಷನೊಂದಿಗೆ 100 ಕೋಟಿ ಗಡಿ ದಾಟಿದ ಏಕೈಕ ಭಾರತೀಯ ನಾಯಕನಾಗಿ ಪ್ರಭಾಸ್ ನಿಂತಿದ್ದಾರೆ.