ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲಿ ಪಡೆ ಮತ್ತು ಪ್ಯಾಲೆಸ್ಟೀನಿಯನ್ (Israel – Palestine) ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಸ್ರೇಲಿ ಹೆಲಿಕಾಪ್ಟರ್ ಗನ್‌ಶಿಪ್‌ಗಳು ಸೋಮವಾರ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಹೊಡೆದುರುಳಿಸಿದೆ.
ಜೆನಿನ್ ನಗರದಲ್ಲಿ ನಡೆದ ಈ ಘಟನೆಯಲ್ಲಿ 15 ವರ್ಷದ ಬಾಲಕ ಸೇರಿದಂತೆ ಮೂವರು ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ಇಸ್ರೇಲಿ ಮಿಲಿಟರಿ ವಾಹನದ ಪಕ್ಕದಲ್ಲಿ ಬಾಂಬ್ ಸ್ಫೋಟಿಸಿದ್ದಾರೆ. ಇದರಿಂದ 29 ಪ್ಯಾಲೆಸ್ಟೀನಿಯಾದವರು ಗಾಯಗೊಂಡಿದ್ದಾರೆ, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಹಲವಾರು ಇಸ್ರೇಲಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ತಿಳಿಸಿವೆ.
ದಾಳಿಯ ಸಮಯದಲ್ಲಿ ಸೇನಾ ಪಡೆಗಳು ಗುಂಡಿನ ದಾಳಿಗೆ ಒಳಗಾಗಿದ್ದು, ಮತ್ತು ಪ್ಯಾಲೇಸ್ಟಿನಿಯನ್ ಬಂದೂಕುಧಾರಿಗಳ ಮೇಲೆ ಗುಂಡು ಹಾರಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ಭದ್ರತಾ ಪಡೆಗಳು ನಗರದಿಂದ ನಿರ್ಗಮಿಸುತ್ತಿದ್ದಂತೆ, ಸೇನಾ ವಾಹನಗಳನ್ನು ಸ್ಫೋಟಕ ಸಾಧನದಿಂದ ಹೊಡೆದು ಹಾನಿಗೊಳಿಸಲಾಗಿದೆ ಎಂದು ಸೈನ್ಯವು ಹೇಳಿದೆ.