ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆನ್ನು ನೋವಿನ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಟೀಮ್ ಇಂಡಿಯಾ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಮತ್ತೆ ತಂಡ ಸೇರುವ ಲಕ್ಷಣ ಕಾಣುತ್ತಿದೆ.
ಹತ್ತಿರ ಹತ್ತಿರ ಒಂದು ವರ್ಷಗಳಿಂದ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದ ಬುಮ್ರಾ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದೆ.
ಕಳೆದ ಸೆಪ್ಟೆಂಬರ್ 25, 2022 ರಲ್ಲಿ ಬುಮ್ರಾ ಕೊನೆಯ ಬಾರಿ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು.ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಇದೀಗ ಭಾರತ ತಂಡವು ಏಷ್ಯಾಕಪ್ಗೂ ಮುನ್ನ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದ್ದು, ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಜಸ್ಪ್ರೀತ್ ಬುಮ್ರಾ ಬಹುತೇಕ ಫಿಟ್ನೆಸ್ ಸಾಧಿಸಿದ್ದು, ಸದ್ಯ ಫಿಸಿಯೋ ಮೇಲ್ವಿಚಾರಣೆಯಲ್ಲಿ ಬೌಲಿಂಗ್ ಅಭ್ಯಾಸವನ್ನು ಕೂಡ ಆರಂಭಿಸಿದ್ದಾರೆ. ಹೀಗಾಗಿಯೇ ಏಷ್ಯಾಕಪ್ಗೂ ಮುನ್ನ ಬುಮ್ರಾ ಭಾರತ ತಂಡಕ್ಕೆ ಮರಳುವುದು ಖಚಿತ ಎನ್ನಲಾಗಿದೆ.
ಒಂದು ವೇಳೆ ಎಲ್ಲಾವೂ ಅಂದುಕೊಂಡಂತೆ ಆದರೆ ಅಕ್ಟೋಬರ್ನಲ್ಲಿ ಬಡಿಯುವ ಏಕದಿನ ವಿಶ್ವಕಪ್ ನಲ್ಲೂ ಬುಮ್ರಾ ಆಡುವುದು ಬಹುತೇಕ ಪಕ್ಕಾ .