ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಶಕ್ತಿ ಯೋಜನೆಯ ಶುರುವಾದ ಬಳಿಕ ರಾಜ್ಯಾದ್ಯಂತ ಮಹಿಳೆಯರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ವಿವಿದೆಡೆ ಸಂಚಾರ ನಡೆಸುತ್ತಿದ್ದಾರೆ.
ದಿನವಿಡೀ ಎಲ್ಲಿ ನೋಡಿದರೂ ಬಸ್ ಫುಲ್. ವಾರಾಂತ್ಯದಲ್ಲಿ ಅಂತೂ ಕೇಳುವುದೇ ಬೇಡ ಬಸ್ ಗತಿಯೇ ಬೇರೆ. ಮೊನ್ನೆಯಷ್ಟೇ ಕೊಳ್ಳೆಗಾಲದಲ್ಲಿ ಮಹಿಳೆಯರು ಬಸ್ ಹತ್ತುವ ಬರದಲ್ಲಿ ಕೆಎಸ್ಆರ್ಟಿಸಿ ಬಸ್ ಒಂದರ ಬಾಗಿಲು ಕಿತ್ತು ಬಂದಿತ್ತು.
ಇದೀಗ ಇಂದು ಕೂಡ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಹತ್ತುವ ಸಮಯದಲ್ಲಿ ನೂಕು ನುಗ್ಗಲಾಗಿ ಕೆಎಸ್ ಆರ್ ಟಿಸಿ ಬಸ್ ನ ಬಾಗಿಲು ಮುರಿದಿರುವ ಘಟನೆ ಮಂಡ್ಯದ ಮಳವಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಸ್ ಬರುತ್ತಿದ್ದಂತೆ ಸೀಟು ಹಿಡಿಯಲು ಜನರು ಸಾಹಸ ಪಟ್ಟು ಬಸ್ಸಿನ ಡೋರ್ ಮುರಿದು ಕೈಯಲ್ಲಿ ಬಂದಿದೆ.