ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದ್ದೂರಿಯಾಗಿ ತೆರೆಕಂಡ ಆದಿಪುರುಷ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಿವಿದೆಡೆ ಟೀಕೆಗಳು ವ್ಯಕ್ತವಾಗುತ್ತಿವೆ.
ಈಗಾಗಲೇ ಅಭಿಮಾನಿಗಳು, ಅನೇಕ ಸಿನಿ ತಾರೆಯರು ಸಿನಿಮಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿದ ಅರುಣ್ ಗೋವಿಲ್, ನಿರ್ಮಾಪಕರನ್ನು ಕಟುವಾಗಿ ಟೀಕಿಸಿದ್ದು, ಚಲನಚಿತ್ರವನ್ನು ‘ಹಾಲಿವುಡ್‌ನ ಕಾರ್ಟೂನ್’ ಎಂದು ಕಿಡಿಕಾರಿದ್ದಾರೆ.
ಹಿಟ್ ಟಿವಿ ಶೋ ರಾಮಾಯಣದಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ್ದ ಕಿರುತೆರೆಯ ನಟ ಅರುಣ್ ಗೋವಿಲ್ ಆದಿಪುರುಷ ನಿರ್ಮಾಪಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿನಿಮಾ ‘ಹಾಲಿವುಡ್‌ನ ಕಾರ್ಟೂನ್’ ಆಗಿದ್ದು, ಇಲ್ಲಿ ಮಹಾಕಾವ್ಯವನ್ನು ಆಧುನೀಕರಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ನಾನು ಚಲನಚಿತ್ರವನ್ನು ನೋಡಿಲ್ಲ . ಆದ್ರೆ ಇಷ್ಟು ವರ್ಷಗಳಿಂದ ನಾವೆಲ್ಲರೂ ತಿಳಿದಿರುವ ಮತ್ತು ಪ್ರೀತಿಸುವ ಚಿತ್ರಣದಲ್ಲಿ ಏನು ತಪ್ಪಾಗಿದೆ? ವಿಷಯಗಳನ್ನು ಬದಲಾಯಿಸುವ ಅಗತ್ಯವೇನು? ಬಹುಶಃ ಚಿತ್ರ ತಂಡ ಭಗವಾನ್ ರಾಮ ಮತ್ತು ಸೀತೆಯ ಮೇಲೆ ಸರಿಯಾದ ನಂಬಿಕೆಯನ್ನು ಹೊಂದಿಲ್ಲ ಮತ್ತು ಅದಕ್ಕಾಗಿಯೇ ಅವರು ಈ ಬದಲಾವಣೆ ಮಾಡಿದರು’ ಎಂದು ಅವರು ಹೇಳಿದರು.