ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವನ್ನೇ ನಡುಗಿಸಿದ ಯುದ್ಧ ರಷ್ಯಾ – ಉಕ್ರೇನ್ ನಡುವಿನ ಕದನ. ಫೆಬ್ರವರಿ 24, 2022 ರಂದು ಉಕ್ರೇನ್ ಯುದ್ಧ ಆರಂಭಗೊಂಡು ನಿರಂತರ ನಡೆಯುತ್ತಿದೆ.
ಈ ವೇಳೆ ಇಡೀ ವಿಶ್ವವೇ ಉಕ್ರೇನ್ ನತ್ತ ಮುಖಮಾಡಿತ್ತು. ಕಾರಣ ಅಲ್ಲಿ ನೆರೆದಿರುವ ಆದೇಶದ ಜನರ ಚಿಂತೆ. ಇದ್ರಲ್ಲಿ ಭಾರತವು ಹೊರತಲ್ಲ . ದೇಶದ ಜನರನ್ನು ಕರೆತರುವುದು ದೊಡ್ಡ ಸಾಹಸವೇ ಆಗಿತ್ತು.
ಈ ವೇಳೆ ಭಾರತ ನಡೆಸಿದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೇ ‘ಆಪರೇಷನ್ ಗಂಗಾ’.
ಹೌದು. ಕೇಂದ್ರ ಸರಕಾರ ಯುದ್ಧ ಪೀಡಿತ ಉಕ್ರೇನ್ ನಿಂದ ‘ಆಪರೇಷನ್ ಗಂಗಾ’ ಮೂಲಕ 22,500 ಭಾರತೀಯ ಪ್ರಜೆಗಳನ್ನು ಕರೆತಂದರು.
ಈ ಕುರಿತು ಇದೀಗ ಹಿಸ್ಟರಿ TV18 ‘ದಿ ಇವಾಕ್ಯುಯೇಶನ್: ಆಪರೇಷನ್ ಗಂಗಾ’ ಎಂಬ ಸಾಕ್ಷ್ಯಚಿತ್ರ ಮಾಡಿದ್ದು, ಜೂನ್ 17 ರಂದು ಪ್ರೀಮಿಯರ್ ಪ್ರದರ್ಶನ ಹೊಂದಿದೆ.
ಈ ಸಾಕ್ಷ್ಯಚಿತ್ರದಲ್ಲಿ ಉಕ್ರೇನ್ ಮತ್ತು ಅದರ ನೆರೆಯ ದೇಶಗಳಾದ ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ರೊಮೇನಿಯಾದಲ್ಲಿ ನೆಲೆಸಿದ್ದ ಭಾರತೀಯರನ್ನು ಹೇಗೆ ಸಹಾಯ ಮಾಡಿದ್ದಾರೆ ಎಂಬುದನ್ನು ತೋರಿಸಿದೆ. ಈ ಮೂಲಕ ಭಾರತವು ಯಾವ ರೀತಿ ವಸುಧೈವ ಕುಟುಂಬಕಂ ಅಂದರೆ ‘ಜಗತ್ತು ಒಂದೇ ಕುಟುಂಬ’ ಎಂಬ ಹಳೆಯ ಮೌಲ್ಯವನ್ನು ಪ್ರತಿಪಾದಿಸಿದೆ ಎಂಬುದರನ್ನು ತೋರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಭಾರತೀಯ ರಾಯಭಾರ ಕಚೇರಿಗಳ ನೇತೃತ್ವದ ಸರ್ಕಾರದ ಪ್ರಯತ್ನಗಳ ಜೊತೆಗೆ, ಹೊರದೇಶದಲ್ಲಿರೋ ವಲಸಿಗರು ಸಹ ಸಹಾಯ ಮಾಡಿದ್ದಾರೆ.
ಈ ಕುರಿತು ಸಾಕ್ಷ್ಯಚಿತ್ರದಲ್ಲಿ ಸ್ವತಃ ಪ್ರಧಾನಿ ಮೋದಿ ಅವರು ಕೂಡ ಮಾತನಾಡಿದ್ದು, ‘ಜಗತ್ತಿನಲ್ಲಿ ಭಾರತೀಯರು ಎಲ್ಲೇ ಇದ್ದರೂ, ಅವರ ಪಾಸ್ಪೋರ್ಟ್ಗಳ ಬಣ್ಣ ಬದಲಾಗಿದ್ದರೂ, ಅವರು ತಮ್ಮ ದೇಶದೊಂದಿಗೆ ರಕ್ತ ಸಂಬಂಧವನ್ನು ಹೊಂದಿದ್ದಾರೆ. ನಾವೆಲ್ಲರೂ ಭಾರತದೊಂದಿಗೆ ರಕ್ತದ ಮೂಲಕ ಸಂಪರ್ಕ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ಉಕ್ರೇನ್ನಿಂದ ಹೊರಬರುವಾಗ, ಅವರಿಗೆ ಎಲ್ಲಾ ಸೌಲಭ್ಯಗಳು ಲಭ್ಯವಿವೆ ಮತ್ತು ಅವರು ಭಾರತದ ಧ್ವಜವನ್ನು ತೋರಿಸಿದಾಗಲೆಲ್ಲಾ ಸುರಕ್ಷಿತವಾಗಿ ಪ್ರಯಾಣಿಸಲು ಮತ್ತು ಗಡಿಗಳನ್ನು ತಲುಪಲು ಅವಕಾಶ ನೀಡಲಾಯಿತು ಎಂದು ಮೋದಿ ಹೇಳಿದರು.
ಚರ್ಮದ ಬಣ್ಣಕ್ಕಿಂತ ಧ್ವಜದ ಬಣ್ಣವು ಶಕ್ತಿಯುತವಾಗಿತ್ತು. ಈ ಸಂಪೂರ್ಣ ಅನುಭವವು ಭಾರತೀಯ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜದ ಶಕ್ತಿಯನ್ನು ಕಲಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದು, ಬೇರೆ ಯಾವುದೇ ದೇಶವು ತಮ್ಮ ನಾಗರಿಕರಿಗಾಗಿ ಇದನ್ನು ಮಾಡಿಲ್ಲ’ ಎಂದೂ ಹೇಳಿದ್ದಾರೆ.
ಇಂಡೋ ಪೋಲಿಷ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಉಪಾಧ್ಯಕ್ಷ ಅಮಿತ್ ಲಾತ್ ಅವರು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಮೊದಲು ಭಾರತೀಯ ವಲಸೆಗಾರರ ಸಹಾಯದ ಕುರಿತು ಹೇಳಿದ್ದಾರೆ. ‘’ನಾನು ಈ ಪ್ರದೇಶದ ಹೋಟೆಲ್ಗಳು ಮತ್ತು ಮೋಟೆಲ್ಗಳಿಗೆ ಸುಮಾರು 160ಕ್ಕೂ ಹೆಚ್ಚು ಕರೆಗಳನ್ನು ಮಾಡಿದ್ದೇನೆ. ನಿರ್ದಿಷ್ಟ ಹೋಟೆಲ್ ಮಾಲೀಕರೊಬ್ಬರ ಜತೆ 24 ಗಂಟೆಗಳಲ್ಲಿ ನನಗೆ 250 ಹಾಸಿಗೆಗಳನ್ನು ಜೋಡಿಸಬೇಕಾಗಿದೆ ಎಂದು ಕರೆ ಮಾಡಿದ್ದೆ. ಅವರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಸಾಕಷ್ಟು ದಯೆ ತೋರಿಸಿದರು’ ಎಂದು ಹೇಳಿದರು.
ನಿರ್ದೇಶಕ ಚಂದ್ರಮೋಹನ್ ನಲ್ಲೂರ್ ಮಾತನಾಡಿ ನಾನು ಕಂಪನಿಯೊಂದಕ್ಕೆ ಕರೆ ಮಾಡಿ ಸುಮಾರು 3,000 ಸಿಮ್ ಕಾರ್ಡ್ಗಳನ್ನು ವ್ಯವಸ್ಥೆ ಮಾಡಬಹುದೇ ಎಂದು ಕೇಳಿದೆ; ಅವರು 20,000 ಸಿಮ್ ಜತೆಗೆ ಉಚಿತ ಇಂಟರ್ನೆಟ್ ನೀಡಿದರು. ಭಾರತೀಯರಿಗೆ ಮಾತ್ರವಲ್ಲದೆ ಇತರರಿಗೂ ನೀಡಲಾಯ್ತು ಎಂದು ಇಂಡೋ-ಪೋಲಿಷ್ ಚೇಂಬರ್ ಆಫ್ ಕಾಮರ್ಸ್ನ ವ್ಯಾಪಾರ ಸಂಬಂಧಗಳ ಹೇಳಿದರು.
ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ರೊಮೇನಿಯಾಗೆ ಕಳುಹಿಸಲಾದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಹ ನಮ್ಮ ಅನಿವಾಸಿ ಭಾರತೀಯರು ನಿಜವಾಗಿಯೂ ನಮ್ಮ ವಿದ್ಯಾರ್ಥಿಗಳ ಸಹಾಯಕ್ಕೆ ಬಂದರು ಎಂದಿದ್ದಾರೆ.ವಿಪ್ರೋ, ಇನ್ಫೋಸಿಸ್, ಸನ್ ಫಾರ್ಮಾ ಮತ್ತು ಹಲವಾರು ಕಂಪನಿಗಳು ಸಹಾಯಕ್ಕೆ ಬಂದವು ಎಂದೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ನೆನೆಪಿಸಿಕೊಂಡಿದ್ದಾರೆ.
ಗಂಗಾ ಕಾರ್ಯಾಚರಣೆಯ ಕ್ಷಣ ಹಂಗೇರಿಗೆ ತೆರಳಿದ್ದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ತಮ್ಮ ಅನುಭವವನ್ನು ಹೇಳಿಕೊಂಡಿದ್ದು, “ಸಾಮಾಜಿಕ ನೆರವು ಒದಗಿಸಿದವರಿಗೆ ಪೂರ್ಣ ಅಂಕಗಳು’’ ಎಂದಿದ್ದಾರೆ.