ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಗೋ ಸೋಮವಾರ 500 ಏರ್ಬಸ್ A320 ಕುಟುಂಬ ವಿಮಾನಗಳನ್ನು ಖರೀದಿಸಲು ಘೋಷಿಸಿದೆ.
ಇದು ಒಂದೇ ಬಾರಿಗೆ ಇಷ್ಟು ದೊಡ್ಡ ಆರ್ಡರ್ ಮಾಡಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ. ಈ ವಿಮಾನಗಳ ವಿತರಣೆಯನ್ನು 2030 ಮತ್ತು 2035 ರ ನಡುವೆ ನಿರೀಕ್ಷಿಸಲಾಗಿದೆ.
ವಾಣಿಜ್ಯ ಬಳಕೆಯ ವಿಮಾನಯಾನ ಕ್ಷೇತ್ರದಲ್ಲಿ ಇದುವರೆಗಿನ ಅತೀದೊಡ್ಡ ಆರ್ಡರ್ ಇದಾಗಿದ್ದು,ಈ ಮೊದಲು ಈ ದಾಖಲೆ ಏರ್ಇಂಡಿಯಾದ ಹೆಸರಲ್ಲಿತ್ತು.
ಏರ್ಇಂಡಿಯಾವನ್ನು ಟಾಟಾ ಖರೀದಿ ಮಾಡಿದ ಬಳಿಕ 470 ವಿಮಾನಗಳ ಖರೀದಿಗೆ ಆರ್ಡರ್ ನೀಡಿತ್ತು. ಇದೀಗ ಇಂಡಿಗೋ 500 ಏರ್ಬಸ್ A320 ಫ್ಯಾಮಿಲಿ ವಿಮಾನಗಳನ್ನು ಖರೀದಿಸಲು 55 ಬಿಲಿಯನ್ ಡಾಲರ್ ಅಂದರೆ 4.39 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ .
ನಾಲ್ಕು ತಿಂಗಳ ಹಿಂದೆ, ಟಾಟಾ ಗ್ರೂಪ್ನ ಏರ್ಲೈನ್ಸ್ ಏರ್ ಇಂಡಿಯಾ 470 ವಿಮಾನಗಳಿಗಾಗಿ ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದಕ್ಕೆ ಸಹಿ ಹಾಕಿತ್ತು, ಈಗ ಈ ದಾಖಲೆಯನ್ನು ಇಂಡಿಗೋ ತೆಗೆದುಕೊಂಡಿದೆ. ಏರ್ ಇಂಡಿಯಾ ಫ್ರೆಂಚ್ ಕಂಪನಿ ಏರ್ಬಸ್ನಿಂದ 250 ವಿಮಾನಗಳನ್ನು ಮತ್ತು ಅಮೆರಿಕದ ಬೋಯಿಂಗ್ ಕಂಪನಿಯಿಂದ 220 ವಿಮಾನಗಳನ್ನು ಒಪ್ಪಂದದಲ್ಲಿ ಪಡೆಯಲಿದೆ. ಈ ಹಿಂದೆ, ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದದ ದಾಖಲೆಯು ಅಮೆರಿಕನ್ ಏರ್ಲೈನ್ಸ್ ಹೆಸರಿನಲ್ಲಿತ್ತು, ಇದು 2011 ರಲ್ಲಿ ಏರ್ಬಸ್ ಮತ್ತು ಬೋಯಿಂಗ್ಗೆ 460 ವಿಮಾನಗಳನ್ನು ಆರ್ಡರ್ ಮಾಡಿತ್ತು.