ನಾಳೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೂ.20ರಂದು ಬೆಳಗ್ಗೆ 11ಕ್ಕೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ (Second PUC Supplementary Result 2023 ಪ್ರಕಟಗೊಳ್ಳಲಿದೆ.

ಈ ಬಗ್ಗೆ ಶಿಕ್ಷಣ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆ ತಿಳಿಸಿದೆ.

ಪರೀಕ್ಷೆ ಬರೆದವರು ಫಲಿತಾಂಶಕ್ಕಾಗಿ ಇಲಾಖೆಯ ಅಧಿಕೃತ ವೆಬ್‌ತಾಣ karresults.nic.in ನಲ್ಲಿ ಬೆಳಗ್ಗೆ 11 ಗಂಟೆಯಿಂದ ಲಾಗ್‌ ಇನ್ ಆಗಿ ಫಲಿತಾಂಶವನ್ನು ಪರಿಶೀಲಿಸಬಹುದು.

ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಮೇ 23ರಿಂದ 3 ಜೂನ್ ವರೆಗೆ ಜರುಗಿತ್ತು.

ಇಲಾಖೆಯ ಅಧಿಕೃತ ವೆಬ್‌ತಾಣ karresults.nic.in ಗೆ ಭೇಟಿ ನೀಡಿ.
ಸ್ಕ್ರೀನ್‌ ಮೇಲೆ ರಿಸಲ್ಟ್‌ ಲಿಂಕ್‌ ತೆರೆದ ಬಳಿಕ ಅದರ ಮೇಲೆ ಕ್ಲಿಕ್ಕಿಸಿ
ಬಳಿಕ ಲಾಗಿನ್‌ ಕ್ರೆಡೆನ್ಶಿಯಲ್ಸ್‌ ಗೆ ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್‌ ಅನ್ನು ಬಳಸಿ
ಸ್ಕ್ರೀನ್‌ ಮೇಲೆ ನಿಮ್ಮ ರಿಸಲ್ಟ್‌ ಕಾಣಿಸಿಕೊಳ್ಳಲಿದೆ.
ರಿಸಲ್ಟ್‌ ಚೆಕ್‌ ಮಾಡಿ ಮತ್ತು ಪೇಜ್‌ ಅನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!