ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಜೆಟ್ನಲ್ಲಿ ನಿರ್ಮಾಣವಾದ ಆದಿಪುರುಷ್ಗೆ ಇದೀಗ ಉಳಿಗಾಲ ಇಲ್ಲದಂತಾಗಿದೆ, ಸಿನಿಮಾಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಆದ್ರೂ ಕಲೆಕ್ಷನ್ನಲ್ಲಿ ಆದಿಪುರುಷ್ ಹಿಂದೆ ಉಳಿದಿಲ್ಲ.
ಸಿನಿಮಾ ಮೂರೇ ದಿನಕ್ಕೆ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸೋಮವಾರ ಮಾತ್ರ ಕಲೆಕ್ಷನ್ನಲ್ಲಿ ಸಿನಿಮಾ ಸೋತಿದ್ದು ಬರೀ 20 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಮೊದಲ ವಾರಾಂತ್ಯದಲ್ಲಿ ಭಾರೀ ಯಶಸ್ಸು ಕಂಡ ಸಿನಿಮಾದ ಓಟ ನಿಲ್ಲುವ ಸೂಚನೆ ಕಾಣಿಸುತ್ತಿದೆ.