SHOCKING| ಬದುಕಿರುವಾಗಲೇ ಸಮಾಧಿ ನಿರ್ಮಿಸಿ, ಪಿಂಡ ಪ್ರದಾನ ಮಾಡಿದ ವ್ಯಕ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದಲ್ಲಿ ಒಬ್ಬ ಮುದುಕ ತಾನೇ ತನ್ನ ಸಮಾಧಿಯನ್ನು ನಿರ್ಮಿಸಿಕೊಂಡಿದ್ದಾನೆ. ಅಂತ್ಯಸಂಸ್ಕಾರದ ನಂತರ ನಡೆಯುವ ಕಾರ್ಯಕ್ರಮಗಳನ್ನು ಆಯೋಜಿಸಿ, ಗ್ರಾಮಸ್ಥರಿಗೆ ಊಟದ ವ್ಯವಸ್ಥೆಯನ್ನೂ ಮಾಡಿದರು. ಈ ವಿಚಿತ್ರ ಘಟನೆಯ ಹಿಂದೆ ಒಂದು ಕಾರಣವಿದೆಯಂತೆ.

ಉತ್ತರ ಪ್ರದೇಶದ ಕೇವಾನ್ ಗ್ರಾಮದ ಜಟಾ ಶಂಕರ್ ಎಂಬ ವೃದ್ಧರು ಬದುಕಿರುವಾಗಲೇ ಅಂತ್ಯಕ್ರಿಯೆ ಕಾರ್ಯಕ್ರಮ ಆಯೋಜಿಸಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಜಟಾ ಶಂಕರ್ ತನ್ನ ಕುಟುಂಬದೊಂದಿಗೆ ಬಹಳ ದಿನಗಳಿಂದ ಜಗಳವಾಡುತ್ತಿದ್ದನಂತೆ. ಹಾಗಾದರೆ ಅವರು ಸತ್ತ ನಂತರ ಅವರು ಅಂತ್ಯಕ್ರಿಯೆಯ ವಿಧಿಗಳನ್ನು ಮಾಡುತ್ತಾರೋ? ಇಲ್ಲವೋ ಎಂಬ ಅನುಮಾನದಿಂದ ಜಟಾ ಶಂಕರ್ ಜೀವಂತವಾಗಿರುವಾಗಲೇ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಜಟಾ ಶಂಕರ್ ಅವರ ಸಮಾಧಿಗೆ ಕಾಂಕ್ರೀಟ್ ಪ್ಲಾಟ್‌ ಫಾರ್ಮನ್ನೂ ನಿರ್ಮಿಸಿದ್ದಾರೆ. ಜೂನ್ 15 ರಂದು, ಮರಣದ 13 ನೇ ದಿನದ ಸ್ಮರಣಾರ್ಥವಾಗಿ ಸ್ವತಃ ಪಿಂಡ ಪ್ರದಾನವನ್ನೂ ಮಾಡಿದ್ದಾರೆ. ಜಟಾ ಶಂಕರ್ ಅವರು ಸತ್ತರೆ ಅವರ ಅಂತಿಮ ಸಂಸ್ಕಾರವನ್ನು ಇಲ್ಲಿಯೇ ಮಾಡಿ ಎಂದು ಗ್ರಾಮಸ್ಥರನ್ನು ಕೋರಿದ್ದಾರೆ.

ಜಟಾ ಶಂಕರ್ ಇನ್ನೂ ಬದುಕಿದ್ದು, ಅವರ ಸಾವಿನ ನಂತರ ನಡೆಯಲಿರುವ ಅಂತಿಮ ಸಂಸ್ಕಾರ ಗ್ರಾಮದಲ್ಲೆಲ್ಲಾ ಹಬ್ಬಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!