ಮಳೆಗಾಲ ಅಥವಾ ಮಳೆ ಬಂತೆಂದರೆ ದೊಡ್ಡ ಸಮಸ್ಯೆ ಅಂದ್ರೆ ಬಟ್ಟೆ ಒಗೆಯೋದು, ಹಿಂಡೋದು, ಒಣಗಿ ಹಾಕೋದು, ಚಳಿ ಅಂತ ಇರುವ ಸ್ವೆಟರ್, ದಪ್ಪನೆ ಬಟ್ಟೆ ಬೆಡ್‌ಶೀಟ್‌ಗಳನ್ನೇ ಬಳಕೆ ಮಾಡ್ತೀವಿ.
ತೊಳೆಯುವುದೇನೋ ಸಮಸ್ಯೆ ಇಲ್ಲ ಆದರೆ ಅದನ್ನು ಒಣಗಿಸೋದು ಹೇಗೆ? ಎರಡು ದಿನ ಬಟ್ಟೆ ಹೊರಗೆ ಇದ್ದರೂ ಒಣಗೋದಿಲ್ಲ, ಥಂಡಿಗೆ ವಾಸನೆ, ಬೂಸ್ಟ್ ಕೂಡ ಬಂದಂತಾಗುತ್ತದೆ.
ದೊಡ್ಡವರ ಬಳಿ ರಿಪೀಟ್ ಮಾಡೋಕೆ ಸಾಕಷ್ಟು ಬಟ್ಟೆ ಇರಬಹುದು ಆದರೆ ಸ್ಕೂಲ್ ಮಕ್ಕಳ ಯುನಿಫಾರ್ಮ್ ಕಥೆ ಏನು? ಸಾಕ್ಸ್ ಕಥೆ ಏನು? ಮಳೆಗಾಲದಲ್ಲಿ ಬಟ್ಟೆ ಹೀಗೆ ಒಣಗಿಸಿ ನೋಡಿ, ಸ್ಬಲ್ಪ ಸಹಾಯ ಆಗಬಹುದು..
ಮನೆಯ ಮುಂದೆ ಅಂಗಳದಲ್ಲಿಯೇ ಬಟ್ಟೆ ಒಣಗಿಸೋಕೆ ಬಟ್ಟೆ ಸ್ಟಾಂಡ್ ತೆಗೆದುಕೊಳ್ಳಿ
ಅಗತ್ಯ ಬಿದ್ದರೆ ಮನೆಯ ಒಳಗೊಂದು ದಾರ ಕಟ್ಟಿಕೊಳ್ಳಿ, ಅರ್ಧಂಬರ್ಧ ಒಣಗಿದ ಬಟ್ಟೆಗಳನ್ನು ಒಣಗಿಸಬಹುದು.
ರಾತ್ರಿ ವೇಳೆ ಹಾಲ್‌ನಲ್ಲಿ ದೊಡ್ಡ ಚಾಪೆ ಹಾಕಿ, ಅದರ ಮೇಲೆ ಬಟ್ಟೆಗಳನ್ನು ಹಾಕಿ ಜೋರಾಗಿ ಫ್ಯಾನ್ ಹಾಕಿ ಬಿಟ್ಟುಬಿಡಿ.
ಒಟ್ಟಿಗೇ ರಾಶಿ ಬಟ್ಟೆ ಒಗೆದು ಹಾಕಬೇಡಿ, ಎರಡು ದಿನಕ್ಕೊಮ್ಮೆ ಬಟ್ಟೆ ಸ್ಟಾಕ್ ಕಡಿಮೆ ಮಾಡಿಕೊಳ್ಳಿ
ಪ್ರತೀ ಬಟ್ಟೆಯನ್ನು ಐರನ್ ಮಾಡಿ ಹಾಕಿಕೊಳ್ಳಿ
ವಾಶಿಂಗ್ ಮಶೀನ್‌ನಲ್ಲಿ ಹೆಚ್ಚು ಸಮಯ ಡ್ರೈ ಆಗುವಂತೆ ಮಾಡಿ