ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಫೇಕ್ ನ್ಯೂಸ್‌ಗಳ ಹಾವಳಿ ಹೆಚ್ಚಾಗಿದೆ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೇಕ್ ನ್ಯೂಸ್ ಹರಿದಾಡುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಫೇಕ್‌ನ್ಯೂಸ್‌ಗಳ ಮೂಲ ಪತ್ತೆ ಮಾಡಿ, ನ್ಯೂಸ್ ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದಾಗ ಫೇಕ್ ನ್ಯೂಸ್‌ಗಳ ಹಾವಳಿ ಹೆಚ್ಚಾಗಿತ್ತು. ಈಗಲೂ ಸರ್ಕಾರ ಜಾರಿಗೆ ಬಂದಾನಂತರದಿಂದ ಫೇಕ್ ನ್ಯೂಸ್‌ಗಳು ಹೆಚ್ಚಾಗಿದ್ದು, ಜನರ ಮಧ್ಯೆ ಮನಸ್ಥಾಪ, ಅಶಾಂತಿ, ಗಲಭೆ ಗೊಂದಲಗಳಿಗೆ ಕಾರಣವಾಗುತ್ತಿವೆ.
ಈ ಕಾರಣದಿಂದಾಗಿ ಫೇಕ್‌ನ್ಯೂಸ್‌ಗಳ ಮೂಲ ಹುಡುಕೋದಕ್ಕೆ ಸಿಎಂ ಸೂಚನೆ ನೀಡಿದ್ದಾರೆ. ಸೈಬರ್ ಪೊಲೀಸರು ಪ್ರತೀ ಬಾರಿ ಫೇಕ್ ನ್ಯೂಸ್ ಪತ್ತೆ ಹಚ್ಚಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದರು. ಬಿಜೆಪಿ ಸರ್ಕಾರ ಬಂದಮೇಲೆ ಇದನ್ನು ನಿಲ್ಲಿಸಲಾಗಿತ್ತು. ಇದನ್ನು ಮತ್ತೆ ಆರಂಭಿಸಬೇಕು, ಫ್ಯಾಕ್ಟ್ಸ್ ಚೆಕ್ ಆಗಲೇಬೇಕು ಎಂದಿದ್ದಾರೆ.
ಮಕ್ಕಳ ಕಳ್ಳರು ಬಂದಿದ್ದಾರೆ, ಗೋಮಾಂಸ ಸಾಗಿಸುವವರಿದ್ದಾರೆ ಈ ರೀತಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸುದ್ದಿಗಳು ಹರಿದಾಡಿ ಸಮಸ್ಯೆಯಾಗಿತ್ತು.