ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ (Sandalwood) ನಟಿ ರಮ್ಯಾ (Ramya) ಏಕಾಏಕಿ ಲಂಡನ್‌ಗೆ (London) ಹಾರಿದ್ದಾರೆ.
ಆದ್ರೆ ಈ ಬಾರಿ ಎಂಜಾಯ್ ಮಾಡಲು ಅಲ್ಲ. ಬದಲಾಗಿ ಚಿಕಿತ್ಸೆಗಾಗಿ.
ಸದ್ಯದಲ್ಲೇ ‘ಉತ್ತರ ಕಾಂಡ’ (Uttarakanda) ಸಿನಿಮಾದಿಂದ ಬಣ್ಣ ಹಚ್ಚಲು ತಯಾರಾಗಿದ್ದಾರೆ. ಅದಕ್ಕೂ ಮುನ್ನ ಲಂಡನ್‌ಗೆ ಹಾರಿದ್ದಾರೆ. ನೈಸರ್ಗಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಲ್ಯಾಕ್ಸ್ ಆಗೋದು. ಹಾಗೂ ಇನ್ನಷ್ಟು ಸ್ಲಿಮ್ ಆಗೋದು. ಇದನ್ನು ಖುದ್ದು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಬಣ್ಣದ ಲೋಕ ತೊರೆದು ಹೋದ ಮೇಲೆ ಸುಮಾರು ಎಂಟು ವರ್ಷ ರಮ್ಯಾ ಡಯಟ್ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲವೇನೊ? ಈಗ ನಾಯಕಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಗೋಲ್ಡನ್ ಗರ್ಲ್ ಆ ಹುರುಪಿನಲ್ಲಿ ದೇಹವನ್ನು ಹುರಿಗೊಳಿಸುತ್ತಿದ್ದಾರೆ. ಪಕ್ಕಾ ಉತ್ತರ ಕರ್ನಾಟಕ ಕತೆಯ ಉತ್ತರಕಾಂಡದಲ್ಲಿ ಮೆರವಣಿಗೆ ಹೊರಡಲಿದ್ದಾರೆ. ದಿ ನ್ಯೂ ರಮ್ಯಾ ಹೆಂಗರ‍್ತಾರೋ ಕಾದುನೋಡಬೇಕಿದೆ.