ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಇಂದಿರಾ ಕ್ಯಾಂಟೀನ್ ಗೆ ಮತ್ತೆ ಜೀವ ಬಂದಿದ್ದು, ಇದೀಗ ಇಂದಿರಾ ಕ್ಯಾಂಟೀನ್ನ ತಿಂಡಿ ಹಾಗೂ ಊಟದ ಮೆನುವನ್ನು ಬದಲಾವಣೆ ಮಾಡಿದ್ದು, ಕಡಿಮೆ ಹಣಕ್ಕೆ ಗುಣಮಟ್ಟದ ಸ್ವಾದಿಷ್ಟ ಆಹಾರ ಲಭ್ಯವಾಗಲಿದೆ.
ರಾಜ್ಯದಲ್ಲಿ ಕೇವಲ ಅನ್ನ, ಸಾಂಬಾರ್ ಮತ್ತು ರುಚಿಕರವಲ್ಲದ ಊಟಕ್ಕೆ ಮಾತ್ರ ಸೀಮಿತವಾಗಿದ್ದ ಇಂದಿರಾ ಕ್ಯಾಂಟೀನ್ನ ಆಹಾರ ಪೂರೈಕೆಯಲ್ಲಿ ಈಗ ಭಾರಿ ಬದಲಾವಣೆ ಆಗಲಿದೆ.
ಇಂದಿರಾ ಕ್ಯಾಂಟೀನ್ನಲ್ಲಿ ಪ್ರಾದೇಶಿಕ ವಿಭಾಗವಾರು ಎಲ್ಲ ಜನರಿಗೂ ತಮ್ಮ ಆಹಾರಗಳು ಲಭ್ಯವಾಗುವಂತೆ ಮೆನು ಸಿದ್ಧ ಪಡಿಸಲಾಗಿದ್ದು, ಬ್ರೆಡ್ ಜಾಮ್, ಮಂಗಳೂರು ಬನ್ಸ್, ಮಂಡ್ಯದ ರಾಗಿಮುದ್ದೆ-ಸೊಪ್ಪುಸಾರು, ಪಾಯಸ, ಚಪಾತಿ-ಸಾಗು ಹೊಸದಾಗಿ ಸೇರ್ಪಡೆಯಾದ ತಿಂಡಿಯಾಗಿವೆ. ಶೀಘ್ರವೇ ಹೊಸ ಮೆನು ಇಂದಿರಾ ಕ್ಯಾಂಟೀನ್ನಲ್ಲಿ ಲಭ್ಯವಾಗಲಿದೆ.
ಇಂದಿರಾ ಕ್ಯಾಂಟೀನ್ ಊಟದ ಮೆನು :
• ಇಡ್ಲಿ ಚಟ್ನಿ/ ಸಾಂಬಾರ್
• ಬ್ರೆಡ್ & ಜಾಮ್
• ಮಂಗಳೂರು ಬನ್ಸ್
• ಬೇಕರಿ ಬನ್
• ಪಲಾವ್
• ಟೊಮ್ಯಾಟೊ ಬಾತ್
• ಖಾರಾ ಪೊಂಗಲ್
• ಬಿಸಿಬೇಳೆ ಬಾತ್
• ಅನ್ನ ಸಾಂಬಾರ್
• ರಾಗಿ ಮುದ್ದೆ ಸೊಪ್ಪುಸಾರು
• ಚಪಾತಿ & ಪಲ್ಯ
• ಟೀ ಕಾಫಿ
ವಾರದ 7 ದಿನಗಳಲ್ಲಿ ಕೊಡುವ ತಿಂಡಿ, ಊಟದ ಮೆನು ವಿವರ:
ಭಾನುವಾರ
ಬೆಳಗ್ಗೆ : ಇಡ್ಲಿ ಚಟ್ನಿ / ಖಾರಾ ಬಾತ್ / ಬ್ರೆಡ್ & ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ / ಮೊಸರಾನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು
ಸೋಮವಾರ
ಬೆಳಗ್ಗೆ : ಇಡ್ಲಿ ಸಾಂಬಾರ್ / ಪಲಾವ್ ರೈತ / ಬ್ರೆಡ್ & ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ ಸೊಪ್ಪು ಸಾರು + ಕೀರ್
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು
ಮಂಗಳವಾರ
ಬೆಳಗ್ಗೆ : ಇಡ್ಲಿ ಚಟ್ನಿ / ಬಿಸಿ ಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ : ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್
ರಾತ್ರಿ : ಅನ್ನ ಸಾಂಬಾರ್ + ರೈತ / ಚಪಾತಿ + ವೆಜ್ ಕರಿ
ಬುಧವಾರ
ಬೆಳಗ್ಗೆ : ಇಡ್ಲಿ ಸಾಂಬಾರ್ / ಖಾರಾ ಬಾತ್ / ಬೇಕರಿ ಬನ್
ಮಧ್ಯಾಹ್ನ : ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ + ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ + ಸೊಪ್ಪು ಸಾರು
ಗುರುವಾರ
ಬೆಳಗ್ಗೆ : ಇಡ್ಲಿ ಸಾಂಬಾರ್ / ಪಲಾವ್ / ಬ್ರೆಡ್ & ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್
ರಾತ್ರಿ : ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ
ಶುಕ್ರವಾರ
ಬೆಳಗ್ಗೆ : ಇಡ್ಲಿ ಸಾಂಬಾರ್ / ಬಿಸಿಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ : ಅನ್ನ ಸಾಂಬಾರ್ / ಮೊಸರಾನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು
ಶನಿವಾರ
ಬೆಳಗ್ಗೆ : ಇಡ್ಲಿ ಸಾಂಬಾರ್ / ಪೊಂಗಲ್ / ಬೇಕರಿ ಬನ್
ಮಧ್ಯಾಹ್ನ : ಅನ್ನ ಸಾಂಬಾರ್ + ಕೀರ್ / ಚಪಾತಿ ಸಾಗು + ಕೀರ್
ರಾತ್ರಿ : ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ