ಕೇರಳ ಮತ್ತೆ ಜ್ವರ ಉಲ್ಬಣ: ಎಚ್ಚರಿಕೆಯ ಕರೆ ನೀಡಿದ ಅರೋಗ್ಯ ಸಚಿವರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇರಳ ರಾಜ್ಯದಲ್ಲಿ ಮತ್ತೆ ಜನರಲ್ಲಿ ಜ್ವರಗಳು ಕಾಣಿಸಿಕೊಳ್ಳುತ್ತಿದ್ದು, ಹೀಗಾಗಿ ಎಚ್ಚರಿಕೆ ವಹಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಂಗಳವಾರ ಸಲಹೆ ನೀಡಿದ್ದಾರೆ.

ಕೇರಳದ ತಿರುವನಂತಪುರಂ ಮತ್ತು ಎರ್ನಾಕುಲಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಮತ್ತು ಇಲಿ ಜ್ವರ ಹರಡುತ್ತಿದ್ದು, ಮುಂಜಾಗ್ರತೆ ವಹಿಸಬೇಕು. ಪರಿಸ್ಥಿತಿಯ ನಿರಂತರ ನಿಗಾ ವಣೆಗಾಗಿ ಮೇಲ್ವಿಚಾರಣಾ ಘಟಕ ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಜನವರಿ-ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು ಏಳು ಡೆಂಗ್ಯೂ ಸಾವುಗಳು ಮತ್ತು ಇಲಿ ಜ್ವರದಿಂದ 27 ಮಂದಿ ಸಾವನ್ನಪ್ಪಿದ್ದಾರೆ . ಆದ್ರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಜ್ವರ ಪ್ರಕರಣಗಳು ಅಥವಾ ಸಂಬಂಧಿತ ಸಾವುಗಳ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಿಲ್ಲ ಆದರೆ, ಜ್ವರದಿಂದ ಯಾವುದೇ ಸಾವು ಸಂಭವಿಸುವುದನ್ನು ತಪ್ಪಿಸಲು ಆರೋಗ್ಯ ಇಲಾಖೆ ಪ್ರಯತ್ನ ನಡೆಸುತ್ತಿದೆ ಎಂದರು.

ಜ್ವರ ಬಾಧಿತ ಜನರಿಗೆ ತ್ವರಿತ ಆರೋಗ್ಯ ಸೌಲಭ್ಯಗಳು ಮತ್ತು ವ್ಯವಸ್ಥೆಗಳನ್ನು ಬಲಪಡಿಸಲಾಗುವುದು. ವೈದ್ಯಕೀಯ ಕಾಲೇಜುಗಳ ಸುಗಮ ಕಾರ್ಯನಿರ್ವಹಣೆ ಮತ್ತು ಜನದಟ್ಟಣೆ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು, ಶೀಘ್ರದಲ್ಲೇ ಮೇಲ್ವಿಚಾರಣಾ ಘಟಕ ಪ್ರಾರಂಭಿಸಲಾಗುವುದು, ಸೊಳ್ಳೆಗಳ ಉತ್ಪತ್ತಿ ತಡೆಗೆ ಮುಂಬರುವ ವಾರಾಂತ್ಯದಲ್ಲಿ ಶಾಲೆಗಳು, ಸರ್ಕಾರಿ ಕಚೇರಿಗಳು ಮತ್ತು ಮನೆಗಳಲ್ಲಿ ‘ಡ್ರೈ ಡೇ’ ಆಚರಿಸಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!