ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ಎಲ್.ಬಿ.ನಗರ ವ್ಯಾಪ್ತಿಯ ಸಾಗರ್ ರಿಂಗ್ ರೋಡ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವೇಳೆ ದುರಂತ ಸಂಭವಿಸಿದೆ. ಪ್ಲೈ ಓವರ್ ಪಿಲ್ಲರ್‌ಗಳ ನಡುವೆ ಕಬ್ಬಿಣದ ಇಳಿಜಾರು ಅಳವಡಿಸುತ್ತಿದ್ದಾಗ ಅದು ಇದ್ದಕ್ಕಿದ್ದಂತೆ ಕುಸಿದಿದೆ.
ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಗಾಯಗೊಂಡ ಕಾರ್ಮಿಕರೆಲ್ಲರೂ ಬಿಹಾರ ಮೂಲದವರಾಗಿದ್ದಾರೆ. ಇವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಅವಶೇಷಗಳಡಿ ಇನ್ನೂ ಕೆಲವರು ಇರಬಹುದೆಂಬ ಶಂಕೆ ವ್ಯಕ್ತಪಡಿಸಿದ ಸಿಬ್ಬಂದಿ ಪೊಕ್ಲೀನ್ ಸಹಾಯದಿಂದ ಅವಶೇಷಗಳನ್ನು ತೆಗೆಯುವ ಕಾರ್ಯದಲ್ಲಿ ತೊಡಗಿದ್ದರು. ಮಾಹಿತಿ ಪಡೆದ ಎಲ್‌ಬಿನಗರ ಶಾಸಕ ಸುಧೀರ್ ರೆಡ್ಡಿ ಮತ್ತು ಜಿಎಚ್‌ಎಂಸಿ ಪ್ರಮುಖ ಯೋಜನೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.