ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಅಮೆರಿಕದ ಹೊಂಡುರಾಸ್ ಮಹಿಳಾ ಜೈಲಿನಲ್ಲಿ ಅವಘಡ ಸಂಭವಿಸಿದ್ದು, 41 ಮಂದಿ ಮೃತಪಟ್ಟಿದ್ದಾರೆ.
ಜೈಲಿನೊಳಗೆ ಗ್ಯಾಂಗ್‌ವಾರ್ ಆರಂಭವಾಗಿದ್ದು, ಅನೇಕ ಕೈದಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜೈಲಿನಲ್ಲಿ ನಡೆದ ಹಿಂಸಾಚಾರದಲ್ಲಿ 41 ಮಹಿಳೆಯರು ಮೃತಪಟ್ಟಿದ್ದಾರೆ.
ಬೆಂಕಿಗಾಹುತಿ, ಚಾಕು ಇರಿತ ಹಾಗೂ ಗುಂಡಿನ ದಾಳಿ ನಡೆಸಿದ್ದು, ಮಹಿಳೆಯರು ಪ್ರಾಣ ಬಿಟ್ಟಿದ್ದಾರೆ. ಕೈದಿಗಳ ಸಂಬಂಧಿಗಳು ಜೈಲಿನ ಮುಂದೆ ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ.
ಗಲಭೆಯಲ್ಲಿ 26 ಮಹಿಳೆಯರಿಗೆ ಬೆಂಕಿ ತಗುಲಿದ್ದು, ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.