ಗುತ್ತಿಗೆದಾರರಿಂದ ಹೇಯ ಕೃತ್ಯ: ಕೂಲಿಕಾರರನ್ನು ಸರಪಳಿಯಿಂದ ಕಟ್ಟಿ ಹಾಕಿ ಕಿರುಕುಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೂಲಿ ಕಾರ್ಮಿಕರನ್ನು ದನಗಳಂತೆ ಕಟ್ಟಿ ಹಾಕಿ ಅವರಿಂದ ವೆಟ್ಟಿಚಾಕರಿ ಮಾಡುತ್ತಿರುವ ಗುತ್ತಿಗೆದಾರರ ದುಷ್ಕೃತ್ಯ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಬೇರೆ ಕಡೆಯಿಂದ ವಲಸೆ ಬಂದಿರುವ ಕಾರ್ಮಿಕರೊಂದಿಗೆ ಕೊಳವೆಬಾವಿ ಕೊರೆಸುತ್ತಿದ್ದಾರೆ. ಆ ಬಾವಿಗಳಲ್ಲಿ ತ್ಯಾಜ್ಯವನ್ನು ಬಕೆಟ್ ಗಳಲ್ಲಿ ಎತ್ತಿ ಅವರೇ ವಿಲೇವಾರಿ ಮಾಡುತ್ತಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಗುತ್ತಿಗೆದಾರರು ಕೂಲಿ ಕಾರ್ಮಿಕರಿಗೆ ಕನಿಷ್ಠ ಊಟವನ್ನೂ ನೀಡದೆ ಕಬ್ಬಿಣದ ಸರಪಳಿಯಿಂದ ಕಟ್ಟಿ ಕೂಲಿ ದುಡಿಯುವಂತೆ ಮಾಡುತ್ತಿದ್ದಾರೆ.

ಗುತ್ತಿಗೆದಾರರಾದ ಸಂತೋಷ್ ಜಾಧವ್ ಮತ್ತು ಕೃಷ್ಣ ಶಿಂಧೆ ಅವರು ಮಹಾರಾಷ್ಟ್ರದ ಒಸ್ಮಾನಾಬಾದ್‌ನಲ್ಲಿ ಬಾವಿ ತೋಡಲು ಕಾರ್ಮಿಕರನ್ನು ಕರೆತಂದು ಅವರೊಂದಿಗೆ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಿಸುತ್ತಿದ್ದಾರೆ. ಇಂತಹ ನಿರ್ಬಂಧಗಳ ಅಡಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದೆ, ಕೂಲಿಕಾರರು ರಾತ್ರಿಯಲ್ಲಿ ತಪ್ಪಿಸಿಕೊಳ್ಳಬಹುದು ಎಂಬ ಕಾರಣದಿಂದಾಗಿ ಕಬ್ಬಿಣದ ಸರಪಳಿಗಳಿಂದ ಕಟ್ಟಿ ಹಾಕಿದ್ದಾರೆ.

ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿರುವುದನ್ನು ಹೊರತುಪಡಿಸಿ, ದಿನಕ್ಕೆ ಒಂದು ಊಟವನ್ನು ಮಾತ್ರ ನೀಡಲಾಗುತ್ತಿತ್ತು. ಬೆಳ್ಳಂಬೆಳಗ್ಗೆ ಬಾವಿಗಳಿಗೆ ಇಳಿಯಬೇಕು. ಮಲಮೂತ್ರ ವಿಸರ್ಜನೆ ಮಾಡಬೇಕಾದರೆ ಬಾವಿಗಳಲ್ಲೇ ನಿತ್ಯಕರ್ಮ ಮುಗಿಸಿ ಅದನ್ನು ಬಕೆಟ್‌ಗಳಿಂದ ಎತ್ತಿ ಹೊರಗೆ ಎಸೆಯಬೇಕಿತ್ತು. ಹಿಂಗೋಳಿಯ 12 ಮಂದಿ ಕೂಲಿಕಾರರಿಗೆ ಒಂದು ರೂಪಾಯಿ ಹಣ ನೀಡದೆ ಹೀಗೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.

ನಿದ್ದೆಯಿಲ್ಲದೆ, ಹೊಟ್ಟೆ ತುಂಬ ಊಟವಿಲ್ಲದೇ ಸುಸ್ತಾಗಿ ಕೆಲವರು ಧೈರ್ಯ ಮಾಡಿ ಒಂದು ದಿನ ತಪ್ಪಿಸಿಕೊಂಡು ಪೊಲೀಸರನ್ನು ಸಂಪರ್ಕಿಸಿದರು. ಅದನ್ನು ಕೇಳಿ ಪೊಲೀಸರು ಬಾವಿ ತೋಡುವ ಜಾಗಕ್ಕೆ ತೆರಳಿ 11 ಕಾರ್ಮಿಕರನ್ನು ಬಿಡುಗಡೆಗೊಳಿಸಿದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದಕ್ಕೆ ಕಾರಣರಾದ ಇಬ್ಬರು ಗುತ್ತಿಗೆದಾರರು ಸೇರಿ ನಾಲ್ವರನ್ನು ಬಂಧಿಸಲಾಗಿದೆ.. ಪ್ರಕರಣದ ತನಿಖೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!