ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾನಮತ್ತನಾದ ವ್ಯಕ್ತಿಯೊಬ್ಬ ಎತ್ತರದ ಸೂಚನಾ ಫಲಕ ಏರಿ ಪುಷ್-ಅಪ್‌ಗಳನ್ನು ಮಾಡಿರುವ ಭಯಾನಕ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಸಂಬಲ್ಪುರದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಕುಡುಕನೊಬ್ಬ ಸೈನ್ ಬೋರ್ಡ್ ಮೇಲೆ ಪುಷ್-ಅಪ್ ಮಾಡುತ್ತಿರುವ ಘಟನೆ ನೋಡಿ ದಾರಿಹೋಕರು ಬೆಚ್ಚಿಬಿದ್ದರು. ಆತನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪೊಲೀಸರಿಗೆ ದೂರು ನೀಡುವ ಮುನ್ನವೇ ವ್ಯಕ್ತಿ ಪರಾರಿಯಾಗಿದ್ದಾನೆ.
ಇಂತಹ ದುಸ್ಸಾಹಸ ಮಾಡುವ ಮಾದಕ ವ್ಯಸನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.