ಯೋಗ ಜನಪ್ರಿಯಕ್ಕೆ ನೆಹರೂಗೆ ಧನ್ಯವಾದ ಎಂದ ಕಾಂಗ್ರೆಸ್: ಯೋಗ ಪುನರುಜ್ಜೀವನಕ್ಕೆ ಮೋದಿ ಸರಕಾರ ಕಾರಣ ಎಂದ ಶಶಿತರೂರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಕಾಂಗ್ರೆಸ್ ಮುಂಜಾನೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಶಿರ್ಷಾಸನ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿ, ಯೋಗವನ್ನು ಜನಪ್ರಿಯಗೊಳಿಸಿದ ಮತ್ತು ರಾಷ್ಟ್ರೀಯ ನೀತಿಯ ಭಾಗವಾಗಿಸಿದ ಪಂಡಿತ್ ನೆಹರೂ ಅವರಿಗೆ ಧನ್ಯವಾದಗಳು’ ಎಂದು ಶೀರ್ಷಿಕೆ ನೀಡಿತ್ತು.

ಇದಕ್ಕೆ ರಿಟ್ವೀಟ್ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಶಶಿತರೂರ್ , ನಮ್ಮ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ವಿದೇಶಾಂಗ ಸಚಿವಾಲಯ ಸೇರಿದಂತೆ ಯೋಗವನ್ನು ಪುನರುಜ್ಜೀವನಗೊಳಿಸಿ ಜನಪ್ರಿಯಗೊಳಿಸಿದವರಿಗೂ ನಾವು ಧನ್ಯವಾದ ಹೇಳಬೇಕು. ಎನ್ ಡಿಎ ಸರ್ಕಾರ ವಿಶ್ವಸಂಸ್ಥೆಯ ಮೂಲಕ ಯೋಗ ದಿನವನ್ನು ಅಂತಾರಾಷ್ಟ್ರೀಯಗೊಳಿಸಿದೆ. ನಾನು ದಶಕಗಳಿಂದ ಹೇಳುತ್ತಾ ಬಂದಿದ್ದೇನೆ, ಯೋಗವು ನಮ್ಮ ಮೃದು ಶಕ್ತಿಯ ಪ್ರಮುಖ ಭಾಗವಾಗಿದೆ. ಅದನ್ನು ಗುರುತಿಸುವುದು ಒಳ್ಳೆಯದು ಎಂದು ಅವರು ಹೇಳಿದರು.
ಈ ಮೂಲಕ ಕಾಂಗ್ರೆಸ್ ಹೇಳಿಕೆ ವಿರುದ್ಧವೇ ಶಶಿತರೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

https://twitter.com/ShashiTharoor/status/1671385186842427393?ref_src=twsrc%5Etfw%7Ctwcamp%5Etweetembed%7Ctwterm%5E1671385186842427393%7Ctwgr%5E55508c6e79c00f6936146131bb6f05d15b66e6ac%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadanewsnow-epaper-kanowcom%2Fhomee-updates-homee%3Fmode%3Dpwaaction%3Dclick

ವಿಶ್ವಸಂಸ್ಥೆಯಲ್ಲಿ ಬುಧವಾರ ನಡೆದ ಯೋಗ ಸಮಾರಂಭದ ನೇತೃತ್ವವನ್ನು ಮೋದಿ ಅವರು ಜನರಲ್ ಅಸೆಂಬ್ಲಿ ಅಧ್ಯಕ್ಷ ಸಬಾಹ್ ಕೊರೊಸಿ ಮತ್ತು ಉಪ ಕಾರ್ಯದರ್ಶಿ ಅಮಿನಾ ಮೊಹಮ್ಮದ್ ಅವರೊಂದಿಗೆ ನಡೆಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ದೇಶದ ಹಲವು ಗಣ್ಯರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗ ಪ್ರದರ್ಶಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!