ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಈ ಬಾರಿ ಪ್ರಧಾನಿ ಮೋದಿ ಅವರು ವಿಶ್ವಸಂಸ್ಥೆ ಆವರಣದಲ್ಲಿ ಆಚರಿಸಿದ್ದಾರೆ.
ಈ ವೇಳೆ ನ್ಯೂಯಾರ್ಕ್ ಮೇಯರ್, ವಿಶ್ವಸಂಸ್ಥೆ ಅಧಿಕಾರಿಗಳು, 180 ರಾಷ್ಟ್ರದ ಗಣ್ಯರು, ಅನಿವಾಸಿ ಭಾರತೀಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಗಿನ್ನಿಸ್ ದಾಖಲೆ ಪುಟ ಸೇರಿದೆ. ವಿವಿಧ ದೇಶಗಳ ಜನರು ಒಂದೇ ಸಮಯದಲ್ಲಿ ಒಂದೇ ಕಡೆ ಒಟ್ಟಾಗಿ ಯೋಗ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಾಣಗೊಂಡಿದೆ.
ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಯೋಗಾಭ್ಯಾಸದ ಜೊತೆಗೆ ಓಂಕಾರವೂ ಮೊಳಗಿದೆ. ಹಲವು ವಿಶೇಷತೆಗಳು ಈ ಬಾರಿಯ ಯೋಗದಿನಾಚರಣೆಯಲ್ಲಿತ್ತು. ಅಂತಾರಾಷ್ಟ್ರೀಯ ಯೋಗದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಯೋಗಾಭ್ಯಾಸಕ್ಕೂ ಮೊದಲು ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ಯೋಗ ಎಲ್ಲರಿಗೂ ಮುಕ್ತವಾಗಿದೆ. ಯೋಗ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ನೀಡುತ್ತದೆ. ಇಷ್ಟೇ ಅಲ್ಲ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.