ಸೌತ್ ಏಷ್ಯನ್ ಫುಟ್ಬಾಲ್ ಫೆಡರೇಶನ್ ಚಾಂಪಿಯನ್‌ಶಿಪ್: ಪಾಕ್ ವಿರುದ್ಧ ಗೆದ್ದು ಸಂಭ್ರಮಿಸಿದ ಭಾರತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೌತ್ ಏಷ್ಯನ್ ಫುಟ್ಬಾಲ್ ಫೆಡರೇಶನ್ ಚಾಂಪಿಯನ್‌ಶಿಪ್​ನ (SAFF Championship 2023) ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡವು (India vs Pakistan) ಭರ್ಜರಿ ಜಯ ಸಾಧಿಸಿದೆ.ಈ ಮೂಲಕ ಪಾಕ್ ಗೆ ತಕ್ಕ ಉತ್ತರ ನೀಡಿದೆ.

ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್​-ಎ ನಲ್ಲಿ ಪಂದ್ಯದ 10ನೇ ನಿಮಿಷದಲ್ಲೇ ಪಾಕ್ ಗೋಲ್ ಕೀಪರ್​ ಕೈಯಿಂದ ಜಾರಿದ ಚೆಂಡನ್ನು ಗೋಲಾಗಿಸಿ ನಾಯಕ ಸುನಿಲ್ ಛೆಟ್ರಿ (Sunil Chhetri) ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ 16ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಸುನಿಲ್ ಛೆಟ್ರಿ ಗೋಲಿನ ಅಂತರವನ್ನು ಎರಡಕ್ಕೇರಿಸಿದರು.

ದ್ವಿತಿಯಾರ್ಧದಲ್ಲೂ ಅದ್ಭುತ ಹೊಂದಾಣಿಕೆಯ ಆಟ ಪ್ರದರ್ಶಿಸಿದ ಭಾರತೀಯ ಆಟಗಾರರು ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಪರಿಣಾಮ ಪಂದ್ಯದ 74ನೇ ನಿಮಿಷದಲ್ಲಿ ಪಾಕ್ ಆಟಗಾರ ಮಾಡಿದ ಫೌಲ್​ನಿಂದಾಗಿ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಲಭಿಸಿತು. ಈ ಅವಕಾಶವನ್ನು ಸಹ ಗೋಲಾಗಿ ಪರಿವರ್ತಿಸುವಲ್ಲಿ ಸುನಿಲ್ ಛೆಟ್ರಿ ಯಶಸ್ವಿಯಾದರು.

ಸುನಿಲ್ ಛೆಟ್ರಿಯ ಹ್ಯಾಟ್ರಿಕ್ ಗೋಲಿನ ಬೆನ್ನಲ್ಲೇ 81ನೇ ನಿಮಿಷದಲ್ಲಿ ಉದಾಂತ ಸಿಂಗ್ ಕುಮಾಮ್ 4ನೇ ಗೋಲು ದಾಖಲಿಸಿದರು. ಈ ಅಂತರವನ್ನು ಕಾಯ್ದುಕೊಂಡ ಭಾರತ ತಂಡವು ಅಂತಿಮವಾಗಿ 4-0 ಅಂತರದಿಂದ ಭರ್ಜರಿ ಜಯ ಸಾಧಿಸಿತು.

ಜಗಳಕ್ಕಿಳಿದ ಪಾಕ್

ಪಂದ್ಯದ 44ನೇ ನಿಮಿಷದಲ್ಲಿ ಚೆಂಡು ಸೈಡ್ ಲೈನ್ ದಾಟಿತು. ಈ ವೇಳೆ ಲೈನ್ ಅಂಪೈರ್ ನಿರ್ಧಾರಕ್ಕೂ ಮುನ್ನ ಪಾಕಿಸ್ತಾನ್ ಆಟಗಾರ ಅಬ್ದುಲ್ಲಾ ಇಕ್ಬಾಲ್ ಚೆಂಡನ್ನು ಥ್ರೋ ಇನ್ ಮಾಡಲು ಮುಂದಾದರು. ಇದೇ ವೇಳೆ ಲೈನ್​ನಲ್ಲೇ ಇದ್ದ ಭಾರತ ತಂಡದ ಮ್ಯಾನೇಜರ್ ಇಗೊರ್ ಸ್ಟಿಮ್ಯಾಕ್ ಪಾಕಿಸ್ತಾನಿ ಆಟಗಾರನ ಕೈಯಿಂದ ಚೆಂಡನ್ನು ಎಳೆದರು. ಇದರಿಂದ ಕುಪಿತಗೊಂಡ ಪಾಕ್ ತಂಡದ ಮ್ಯಾನೇಜರ್ ಹಾಗೂ ಆಟಗಾರರು ಭಾರತ ತಂಡದ ಕೋಚ್ ವಿರುದ್ಧ ಜಗಳಕ್ಕಿಳಿದರು. ಇತ್ತ ಟೀಮ್ ಇಂಡಿಯಾ ಆಟಗಾರರೂ ಕೂಡ ಪ್ರತಿರೋಧ ತೋರಿದ್ದರಿಂದ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಯಿತು.ಈ ವೇಳೆ ಮಧ್ಯೆಪ್ರವೇಶಿಸಿದ ರೆಫರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಲ್ಲದೆ ಟೀಮ್ ಇಂಡಿಯಾ ಮ್ಯಾನೇಜರ್ ಸ್ಟಿಮ್ಯಾಕ್‌ ಅವರಿಗೆ ರೆಫರಿ ರೆಡ್ ಕಾರ್ಡ್ ನೀಡಿದರೆ, ಪಾಕಿಸ್ತಾನದ ಮ್ಯಾನೇಜರ್ ಶಹಜಾದ್ ಅನ್ವರ್‌ಗೆ ಹಳದಿ ಕಾರ್ಡ್ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!