ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಕ್ತ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ದಾಖಲಾತಿಗೆ ನೀಡಲಾಗಿದ್ದ ದಂಡ ರಹಿತ ಕಾಲಾವಕಾಶವನ್ನುಜೂನ್ 30ರ ವರೆಗೆ ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಯಾವುದೇ ದಂಡವಿಲ್ಲದೇ ಪ್ರವೇಶ ಪಡೆಯಲು ಜೂನ್ 30, ದಂಡ ಶುಲ್ಕ ರಹಿತ ಕಾಲಾವಕಾಶವನ್ನು ಜು.10ರ ವರೆಗೆ ಹಾಗೂ ದಂಡ ಶುಲ್ಕ ಪಾವತಿಸಿ ಜು.20ರ ವರೆಗೆ ದಾಖಲಾತಿ ಪಡೆಯಲು ಅವಕಾಶ ನೀಡಿದೆ.
ಈ ಮೊದಲು ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಲು ಜೂ.15 ಕೊನೆಯ ದಿನವಾಗಿತ್ತು.
ದಂಡ ಶುಲ್ಕದೊಂದಿಗೆ ದಾಖಲಾತಿಗೆ ಜೂ.22ರ ವರೆಗೆ ಅವಕಾಶ ನೀಡಲಾಗಿತ್ತು.
ಜೂ.30ರ ನಂತರ ಜು.10ರ ವರೆಗೆ ಪ್ರವೇಶ ಪಡೆಯುವವರಿಗೆ 670 ರೂ. ದಂಡ ಶುಲ್ಕದೊಂದಿಗೆ ಹಾಗೂ ಜು.10ರ ನಂತರ ಜು.20ರ ವರೆಗೆ ಪ್ರವೇಶ ಪಡೆಯುವವರಿಗೆ 2,890 ರೂ. ವಿಶೇಷ ದಂಡ ಶುಲ್ಕದೊಂದಿಗೆ ದಾಖಲಾತಿ ಪಡೆಯಲು ಅವಕಾಶ ನೀಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.