ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಪ್ರಧಾನಿ ಮೋದಿ ಅಮೆರಿಕ ಪ್ರವಾಸದಲ್ಲಿದ್ದಾರೆ. ಇದೀಗ ಪ್ರಧಾನಿ ವಾಷಿಂಗ್ಟನ್ ತಲುಪಿದ್ದು, ಭರ್ಜರಿ ಸ್ವಾಗತ ಸಿಕ್ಕಿದೆ.
ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಆಂಡ್ರ್ಯೂಸ್ ವಾಯುನೆಲೆಯಲ್ಲಿ ಅನಿವಾಸಿ ಭಾರತೀಯ ಸಮೂಹದಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಭಾರತೀಯ ಸಮುದಾಯದ ಪ್ರೀತಿಪೂರ್ವಕ ಹಾಗೂ ಇಂದ್ರ ದೇವತೆಯ ಆಶೀರ್ವಾದ ಪಡೆದಿದ್ದೇನೆ. ಜನರ ಜತೆ ದೇವರ ಆಶೀರ್ವಾದ ಸಿಕ್ಕಿದ್ದು ವಿಶೇಷವಾಗಿತ್ತು ಎಂದಿದ್ದಾರೆ.
ಇಂದು ಪ್ರಧಾನಿ ಮೋದಿ ಕೈಗಾರಿಕೆಗಳ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ. ಮೈಕ್ರಾನ್, ಜಿಇ ಹಾಗೂ ಅಪ್ಲೈಡ್ ಮೆಟೀರಿಯಲ್ಸ್‌ನ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಲಿದ್ದಾರೆ. ತದನಂತರ ಜೋ ಬಿಡೆನ್ ದಂಪತಿ ಜೊತೆ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.