ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಸಿಡಿಲಿಗೆ ಏಳು ಮಂದಿ ಮೃತಪಟ್ಟಿದ್ದಾರೆ.
ಮಾಲ್ಡಾ ಜಿಲ್ಲೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ಕೃಷ್ಣ ಚೌಧರಿ, ದೆಬೋಶ್ರೀ, ನಜ್ರುಲ್, ರಾಬಿಜಾನ್ ಹಾಗೂ ಮಕ್ಕಳಾದ ಉಮ್ಮೆ ಕುಲ್ಸುಮ್, ಸೋಮಿತ್ ಮಂಡಲ್ ಹಾಗೂ ಇಸಾ ಸರ್ಕಾರ್ ಮೃತರು.
ಮಾಲ್ಡಾದ ಬಂಗಿತೊಲಾ ಹೈಸ್ಕೂಲ್ ಬಳಿ ಸಿಡಿಲು ಬಡಿದು 12 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಎರಡು ವರ್ಷದ ಹಿಂದೆಯೂ ಸಿಡಿಲಿನ ಅಬ್ಬರಕ್ಕೆ ಪಶ್ಚಿಮ ಬಂಗಾಳ ತತ್ತರಿಸಿತ್ತು. ರಾಜಸ್ಥಾನ, ಉತ್ತರಪ್ರದೇಶ ಹಾಗೂ ಬಿಹಾರ ಸೇರಿದಂತೆ ವಿವಿಧೆಡೆ ಒಂದೇ ದಿನ 61 ಮಂದಿ ಮೃತಪಟ್ಟಿದ್ದರು.ಕಳೆದ ಎರಡು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.