ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹಾಗೂ ಅವರ ಪತ್ನಿ ಜಿಲ್ ಬಿಡೆನ್ ಅವರಿಗೆ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾರೆ.
ರಾಜಸ್ಥಾನದ ಜೈಪುರದ ಕುಶಲಕರ್ಮಿಯೊಬ್ಬರ ಮೈಸೂರಿನಿಂದ ತಂದ ಶ್ರೀಗಂಧ ಮರದ ಕಟ್ಟಿಗೆಯಿಂದ ತಯಾರಿಸಿದ ಬಾಕ್ಸ್‌ನಲ್ಲಿ ವಜ್ರ ಹಾಗೂ ಬೆಳ್ಳಿ ಗಣೇಶನನ್ನು ಉಡುಗೊಡೆಯಾಗಿ ನೀಡಿದ್ದಾರೆ. ಪೆಟ್ಟಿಗೆಯ ಹೊರಗೆ ಸಸ್ಯ ಹಾಗೂ ಪ್ರಾಣಿಗಳನ್ನು ಕೆತ್ತಲಾಗಿದೆ.
ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರಿಗೆ 7.5 ಕ್ಯಾರೆಟ್ ಹಸಿರು ವಜ್ರವನ್ನು ಪ್ರಧಾನಿ ಮೋದಿ ನೀಡಿದ್ದಾರೆ.
ಕೊಲ್ಕತ್ತಾದ ಬೆಳ್ಳಿ ವ್ಯಾಪಾರಿಗಳಿಂದ ಗಣೇಶ ದೇವರ ವಿಗ್ರಹವನ್ನು ತಯಾರು ಮಾಡಿಸಿದ್ದು, ಹಿಂದೂ ದೇವರನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಯಾವುದೇ ವಿಘ್ನ ಬಾರದಂತೆ ನಮ್ಮನ್ನು ರಕ್ಷಿಸುವ, ಪ್ರಥಮ ಪೂಜಿತನಾದ ಗಣೇಶನ ವಿಗ್ರಹವನ್ನು ಪಡೆದು ಜೋ ಬಿಡೆನ್ ಅವರು ಧನ್ಯವಾದ ಸೂಚಿಸಿದ್ದಾರೆ.
ಇದರ ಜೊತೆಗೆ ಕೆಲ ಬಾಕ್ಸ್‌ಗಳು ಇವೆ, ಇದರಲ್ಲಿ ತುಪ್ಪ, ಅಕ್ಕಿ, ರೇಷ್ಮೆ ಬಟ್ಟೆ, ಎಳ್ಳೆ, ಓಂ ಹಾಗೂ ಬೆಲ್ಲವನ್ನು ಇಡಲಾಗಿದೆ.