ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವಾರ ಸಿನಿಪ್ರಿಯರಿಗೆ ಖುಷಿ ಸುದ್ದಿಯೊಂದಿದೆ. ಇದೀಗ ಥಿಯೇಟರ್‌ನಲ್ಲಿ ಆದಿಪುರುಷ್ ಹಾಗೂ ಝರಾ ಹಟ್ಕೆ ಝರಾ ಬಚ್ಕೆ ಸಿನಿಮಾಗಳು ರಾರಾಜಿಸುತ್ತಿದ್ದು, ಇದೀಗ ಈ ಸಿನಿಮಾಗಳ ಪ್ರದರ್ಶನಕ್ಕೆ ಟಕ್ಕರ್ ಕೊಡೋದಕ್ಕೆ ಹೊಸ ಸಿನಿಮಾಗಳು ಎಂಟ್ರಿ ನೀಡುತ್ತಿವೆ.
ಮುಖ್ಯವಾಗಿ ಹೊಂಬಾಳೆ ಫಿಲಂಸ್‌ನ ಧೂಮಂ ಈ ವಾರ ರಿಲೀಸ್ ಆಗುತ್ತಿದೆ. ಮಲಯಾಳಂ ಹಾಗೂ ಕನ್ನಡದಲ್ಲಿ ಧೂಮಂ ರಿಲೀಸ್ ಆಗಲಿದ್ದು, ಹೊಂಬಾಳೆ ಫಿಲ್ಮ್ಸ್, ಪವನ್ ಕುಮಾರ್ ನಿರ್ದೇಶನ ಹಾಗೂ ಫಹಾದ್ ಫಾಸಿಲ್ ನಟನೆ ಈ ಸಿನಿಮಾ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಕನ್ನಡದಲ್ಲಿ ಅಗ್ರಸೇನಾ, ಮೊದಲ ಮಳೆ ಸಿನಿಮಾ ರಿಲೀಸ್ ಆಗ್ತಿದೆ.
ಹಾರರ‍್ಸ್ ಆಫ್ ಹಾರ್ಟ್ ಹಾಗೂ ಮನು ಚರಿತ್ರಾ ಕೂಡ ಈ ವಾರವೇ ರಿಲೀಸ್ ಆಗಲಿದೆ. ಇನ್ನು ಥಿಯೇಟರ್‌ಗಳಲ್ಲಿ ಸದ್ದು ಮಾಡಿದ ಸಿನಿಮಾಗಳು ಒಟಿಟಿಗೆ ಲಗ್ಗೆ ಇಡುತ್ತಿವೆ. ಕಿಸಿ ಕ ಭಾಯ್ ಕಿಸಿ ಕಿ ಜಾನ್, ಏಜೆಂಟ್ ಹಾಗೂ ದಿ ಕೇರಳ ಸ್ಟೋರಿ ಒಟಿಟಿಗೆ ಕಾಲಿಡುತ್ತಿದೆ.