ಹೊಸದಿಗಂತ ಡಿಜಿಟಲ್ ಡೆಸ್ಕ್:
ಮರಣೋತ್ತರ ಪರೀಕ್ಷೆ ನಡೆಸುವ ವೇಳೆ ಬಾಲಕಿಯ ಶವ ಎದ್ದು ಕುಳಿತಿರುವ ಘಟನೆ ಮಿರ್ಜಾಪುರದಲ್ಲಿ ನಡೆದಿದೆ.
ಬಾಲಕಿಯೊಬ್ಬಳು ಕಾಲು ಜಾರಿ ಕಾಲುವೆಗೆ ಬಿದ್ದಿದ್ದಳು. ಬಾಲಕಿ ಸತ್ತಿದ್ದಾಳೆಂದು ಭಾವಿಸಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ಶವವನ್ನು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಈ ವೇಳೆ ಹೃದಯದ ಬಡಿತವನ್ನು ಪರೀಕ್ಷಿಸಿದ ವೈದ್ಯರು ಆಘಾತಕ್ಕೊಳಗಾಗಿದ್ದಾರೆ. ಅಷ್ಟರಲ್ಲಿಯೇ ಬಾಲಕಿ ಕಣ್ಣು ಬಿಟ್ಟಿದ್ದಾಳೆ.
ಬಳಿಕ ಬಾಲಕಿ ಮೃತಪಟ್ಟಿಲ್ಲ ಎಂದು ತಿಳಿದ ವೈದ್ಯರು ಆಕೆ ಪ್ರಜ್ಞಾಹೀನಳಾಗಿರುವುದನ್ನು ದೃಢಪಡಿಸಿ ತಕ್ಷಣ ತುರ್ತು ಚಿಕಿತ್ಸೆ ನೀಡಿದ್ದಾರೆ. ಬಾಲಕಿ ನುಂಗಿದ್ದ ನೀರನ್ನು ಹೊರ ತೆಗೆಯುವ ಮೂಲಕ ಚಿಕಿತ್ಸೆ ನೀಡಿದ್ದಾರೆ. ಸ್ವಲ್ಪ ಸಮಯದಲ್ಲೇ ಪೂರ್ಣ ಪ್ರಜ್ಞೆ ಬಂದ ಬಾಲಕಿಯ ಮಾನಸಿಕ ಸ್ಥಿತಿಯನ್ನೂ ವೈದ್ಯರು ಪರೀಕ್ಷಿಸಿದ್ದಾರೆ. ನಂತರ ಆಕೆಯನ್ನು ಮನೆಗೆ ಕಳುಹಿಸಿದ್ದಾರೆ.