ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳದಲ್ಲಿ ತಗಡಿನ ಮನೆಯಲ್ಲಿ ಎರಡೇ ಎರಡು ಬಲ್ಬ್ ಹೊಂದಿದ್ದ ವೃದ್ಧೆಗೆ ಒಂದು ಲಕ್ಷ ಕರೆಂಟ್ ಬಿಲ್ ಬಂದಿದ್ದ ಸಮಸ್ಯೆ ಇದೀಗ ಪರಿಹಾರವಾಗಿದೆ.
ಗಿರಿಜಮ್ಮ ಅವರ ಮನೆಯಲ್ಲಿ ಎರಡು ಲೈಟ್ ಬಿಟ್ಟರೆ ಇನ್ಯಾವ ಎಲೆಕ್ಟ್ರಿಕ್ ವಸ್ತುವೂ ಇಲ್ಲ. ಹಾಗಿದ್ದರೂ ಒಂದು ಲಕ್ಷ ಕರೆಂಟ್ ಬಿಲ್ ಬಂದಿರುವ ವಿಷಯ ಎಲ್ಲೆಡೆ ವೈರಲ್ ಆಗಿತ್ತು.
ಇದೀಗ ಜೆಸ್ಕಾಂ ಇಂಜಿನಿಯರ್ ಸಮಸ್ಯೆ ಬಗೆಹರಿಸಿದ್ದು, 2021ರಿಂದ ಮೀಟರ್ ರೀಡಿಂಗ್ ಸಮಸ್ಯೆಯಾಗಿದೆ. ಹಾಗಾಗಿ ಅಷ್ಟು ಬಿಲ್ ಬಂದಿದೆ. ಗಿರಿಜಮ್ಮ ಹಣ ಕಟ್ಟುವುದು ಬೇಡ, ನಮ್ಮಿಂದಲೇ ತಪ್ಪಾಗಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.