ನಿಮಗೆ ಆಗಾಗ ತಲೆಸುತ್ತು ಬರುತ್ತಿದೆಯೇ? ದೇಹದ ಗಂಟು ಗಂಟುಗಳು ನೋವಾಗುತ್ತಿವೆಯೇ? ಕ್ಯಾಲ್ಸಿಯಂ ಕೊರತೆಯೆಂದು ಕ್ಯಾಲ್ಸಿಯಂಯುಕ್ತ ಟ್ಯಾಬ್ಲೆಟ್ಟೋ, ಆಹಾರಕ್ಕೋ ಮೊರೆಹೋದರೆ ಖಂಡಿತಾ ಅಪಾಯ ಕಟ್ಟಿಟ್ಟ ಬುತ್ತಿ.
ಕೇವಲ ಕ್ಯಾಲ್ಶಿಯಂ ಕೊರತೆಯಿಂದಷ್ಟೇ ಇವು ಸಂಭವಿಸುವುದಿಲ್ಲ. ಬದಲಾಗಿ ದೇಹದಲ್ಲಿ ಒಮೆಗಾ3 ಮಟ್ಟದ ಇಳೆಯಿದ್ದರೂ ಈ ಸಮಸ್ಯೆಗಳು ತಲೆದೋರುತ್ತವೆ. ನಿಮ್ಮ ಉಗುರುಗಳು ದುರ್ಬಲವಾಗಿದ್ದರೂ ನೀವು ಒಮೆಗಾ3 ಸಮಸ್ಯೆ ಕಾಡುವ ಸಾಧ್ಯತೆಯಿದೆ.
ಒಣ ಚರ್ಮ, ಮರೆವಿನಂತಹ ಕಾಯಿಲೆಗಳು ಇದೇ ಕಾರಣಕ್ಕೆ ಬರುತ್ತವೆ. ನಿಮ್ಮ ನಿತ್ಯ ಆಹಾರದಲ್ಲಿ ಒಮೆಗಾ 3 ಅಂಶವಿರುವ ಆಹಾರಗಳಿಗೆ ಆದ್ಯತೆನೀಡಿದ್ದೇ ಆದಲ್ಲಿ ಇದರಿಂದ ಗುಣಮುಖರಾಗಬಹುದು. ಅಗಸೆಬೀಜ, ವಾಲ್ನಟ್ಸ್, ಬಾದಾಮಿ, ಕಡಲೆ, ಪಾಲಕ್ ಸೊಪ್ಪು, ತೆಂಗಿನೆಣ್ಣೆಯ ಬಳಕೆಮಾಡುವುದರಿಂದ ಇದನ್ನು ನಿಯಂತ್ರಣದಲ್ಲಿಡಬಹುದಾಗಿದೆ.