ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವು ದಿನಗಳಿಂದ ರಾಜ್ಯದಲ್ಲಿ ವಿದ್ಯುತ್ ಬಿಲ್ ದುಪ್ಪಟ್ಟು ಬರುತ್ತಿರುತ್ತಿದ್ದು, ಸಾರ್ಜಜನಿಕರು ರಾಜ್ಯ ಸರ್ಕಾರದ ಕಿಡಿಕಾರುತ್ತಿದ್ದಾರೆ. ಕೆಲವೆಡೆ ವಿದ್ಯುತ್ ಬಿಲ್ ಲಕ್ಷಾನುಗಟ್ಟಲೇ ಬಂದಿರುವುದು ವರದಿಯಾಗುತ್ತಿವೆ.
ಇದೀಗ ಈ ಬಗ್ಗೆಇಂಧನ ಸಚಿವ ಕೆಜೆ ಜಾರ್ಜ್ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಆಗಿದ್ದಕ್ಕೆ ಕಾರಣ ನಾವಲ್ಲ. ಹಿಂದಿನ ಸರ್ಕಾರವಿದ್ದಾಗ KERC ವಿದ್ಯುತ್ ದರ ಏರಿಕೆ ಮಾಡಿದೆ. ಏಪ್ರಿಲ್, ಮೇ ತಿಂಗಳಿನ ಬಿಲ್ ಕಲೆಕ್ಟ್ ಮಾಡಲು ಹೇಳಿದ್ದಾರೆ. ಹೀಗಾಗಿ ಒಂದೇ ಬಾರಿ ಎರಡು ತಿಂಗಳ ವಿದ್ಯುತ್ ಏರಿಕೆ ಹಿನ್ನೆಲೆಯಲ್ಲಿ ಬಿಲ್ ಜಾಸ್ತಿ ಬರುತ್ತಿದೆ. ಇನ್ನು ಕೆಲವೆಡೆ ಮೀಟರ್ ಸಮಸ್ಯೆಯಿಂದ ವಿದ್ಯುತ್ ದರ ಹೆಚ್ಚಳ ಆಗಿದೆ. ನಮ್ಮ ಸಾಫ್ಟ್ವೇರ್ ಹಳೆಯದು, ಹೊಸ ಸಾಫ್ಟ್ವೇರ್ ಹಾಕಬೇಕು ಎಂದು ಸ್ಪಷ್ಟಪಡಿಸಿದ್ದಾರೆ .
ಇನ್ನು ಮೀಟರ್ ಪ್ರಾಬ್ಲಮ್ ಯಿಂದ ಕೂಡ ಒಂದೇ ಬಾರಿ ಎರಡು ತಿಂಗಳಗಳ ಬಿಲ್ ಬಂದಿದೆ. ನಮ್ಮ ಸರ್ಕಾರದಿಂದ ಪ್ರಾಬ್ಲಮ್ ಆಗಿಲ್ಲ. ನಮ್ಮ ಸಾಫ್ಟವೇರ್ ಕೂಡ 12 ವರ್ಷ ಹಳೆಯದು. ತಕ್ಷಣ ಬದಲಾವಣೆ ಮಾಡುವುದು ಕಷ್ಟ. ಕೊಪ್ಪಳದಲ್ಲೂ ಅಜ್ಜಿ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದೆ ಮೀಟರ್ ಬಿಲ್ ಸಮಸ್ಯೆಯಿಂದ ಬಿಲ್ ಹೆಚ್ಚಿಗೆ ಬಂದಿದೆ. ಆ ಅಜ್ಜಿ ಕರೆಂಟ್ ಬಿಲ್ ಅಷ್ಟು ಕಟ್ಟಬೇಕಿಲ್ಲ. ಕರೆಂಟ್ ಬಿಲ್ಲ ಹೆಚ್ಚಳ ಆಗಿರೋದಕ್ಕೆ ಕಾರಣ ನಾವಲ್ಲ ಎಂದು ತಿಳಿಸಿದರು.
ವಿದ್ಯುತ್ ದರ ಹೆಚ್ಚಳ ಕಾರಣ ನಾವಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಸಹ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡುತ್ತಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿಲ್ಲ. ಗ್ಯಾರಂಟಿಗಳನ್ನು ಜಾರಿಗೆ ಮಾಡಲು ಹಣ ಕ್ರೂಢೀಕರಣಕ್ಕೆ ಕಾಂಗ್ರೆಸ್ ದರ ಹೆಚ್ಚಳ ಮಾಡಿದೆ ಎನ್ನುತ್ತಿದ್ದಾರೆ.