ಹೊಸ ಸಾಹಸಕ್ಕೆ ಕೈಹಾಕಿದ ಕ್ರಿಕೆಟಿಗ: ನೆದರ್‌ಲೆಂಡ್‌ನಲ್ಲಿ ಓಪನ್ ಆಯಿತು ‘ರೈನಾ’ ಹೊಟೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಇದೀಗ ಎರಡನೇ ಇನಿಂಗ್ಸ್‌ ಆರಂಭಿಸಿದ್ದಾರೆ.

ಆದ್ರೆ ಈ ಬಾರಿ ಮೈದಾನದಲ್ಲಿ ಅಲ್ಲ. ಬದಲಾಗಿ ಭಾರತೀಯ ಶೈಲಿಯ ರೆಸ್ಟೋರೆಂಟ್‌ವೊಂದನ್ನು ನೆದರ್‌ಲೆಂಡ್‌ ರಾಜಧಾನಿ ಆ್ಯಮ್ಸ್ಟರ್ಡ್ಯಾಮ್‌ನಲ್ಲಿ ಆರಂಭಿಸಿದ್ದಾರೆ.

ರೈನಾ, ಸೋಷಿಯಲ್ ಮೀಡಿಯಾ ಮೂಲಕ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.

ನೆದರ್‌ಲೆಂಡ್‌ನ ಹೃದಯಭಾಗದಲ್ಲಿ ‘ರೈನಾ ಇಂಡಿಯನ್ ರೆಸ್ಟೋರೆಂಟ್’ ಎಂಬ ಹೆಸರಿನ ರೆಸ್ಟೋರೆಂಟ್‌ನ್ನು ಸುರೇಶ್ ರೈನಾ ಆರಂಭಿಸಿದ್ದಾರೆ. ಈ ಕುರಿತಂತೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ರೆಸ್ಟೋರೆಂಟ್‌ನಲ್ಲಿನಲ್ಲಿರುವ ಫೋಟೋ ಜತೆಗೆ, ‘ಆ್ಯಮ್ಸ್ಟರ್ಡ್ಯಾಮ್‌ನಲ್ಲಿ ರೈನಾ ಇಂಡಿಯನ್ ರೆಸ್ಟೋರೆಂಟ್ ಅನ್ನು ಪರಿಚಯಿಸಲು ನಾನು ಸಂಪೂರ್ಣವಾಗಿ ಭಾವಪರವಶನಾಗಿದ್ದೇನೆ, ಅಲ್ಲಿ ನನ್ನ ಆಹಾರ ಮತ್ತು ಅಡುಗೆಯ ಮೇಲಿನ ಉತ್ಸಾಹವನ್ನು ಕಾಣಬಹುದಾಗಿದೆ. ಹಲವು ವರ್ಷಗಳಿಂದ ನೀವು ನಾನು ಫುಡ್ ತಯಾರಿಸುವುದನ್ನು ನೋಡುತ್ತಲೇ ಬಂದಿದ್ದೀರ. ಇದೀಗ ನಾನು ಹೊಸ ಸಾಹಸವೊಂದನ್ನು ಕೈಗೊಂಡಿದ್ದೇನೆ. ಯೂರೋಪಿನ ಹೃದಯಭಾಗದಲ್ಲಿ ಭಾರತದ ಬೇರೆ ಬೇರೆ ಭಾಗದ ವಿವಿಧ ಪ್ಲೇವರ್‌ನ ಮೂಲ ರುಚಿ ಒಳಗೊಂಡಿರುವ ಆಹಾರವು ಸವಿಯಲು ಸಿಗಲಿದೆ’ ಎಂದು ಬರೆದುಕೊಂಡಿದ್ದಾರೆ.

https://twitter.com/ImRaina/status/1672152834215669763?ref_src=twsrc%5Etfw%7Ctwcamp%5Etweetembed%7Ctwterm%5E1672152834215669763%7Ctwgr%5E236397be3de84084e619e20d3d2606517b0794ad%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FImRaina%2Fstatus%2F1672152834215669763%3Fref_src%3Dtwsrc5Etfw

ಸುರೇಶ್ ರೈನಾ ಅವರ ಹೊಸ ಸಾಹಸಕ್ಕೆ ಹರ್ಭಜನ್ ಸಿಂಗ್ ಕೂಡಾ ಶುಭ ಹಾರೈಸಿದ್ದಾರೆ.’ಅಭಿನಂದನೆಗಳು ಬ್ರದರ್‌, ನಾನೂ ಸದ್ಯದಲ್ಲಿಯೇ ಊಟ ಮಾಡಲು ಅಲ್ಲಿಗೆ ಭೇಟಿ ಕೊಡುತ್ತೇನೆ’ ಎಂದು ಕಾಮೆಂಟ್ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!