ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಉಂಟಾದ ವಿದುತ್ಯ್ ಬೆಲೆ ಏರಿಕೆಗೆ , ಗೃಹ ಜ್ಯೋತಿ ಯೋಜನೆಗೂ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿಂದು ರಾಜ್ಯದ ಕೈಗಾರಿಕೋದ್ಯಮಿಗಳು ಭೇಟಿ ಮಾಡಿದ ಮಾತನಾಡಿದ ಅವರು, ಗೃಹಜ್ಯೋತಿ ಹೊರೆಯನ್ನು ಕೈಗಾರಿಕೆಗಳ ಮೇಲೆ ಹಾಕಲಾಗಿದೆ ಎಂಬ ಮಾತು ಶುದ್ಧ ಸುಳ್ಳು, ಇದೊಂದು ತಪ್ಪು ಅಭಿಪ್ರಾಯ ಎಂದರು.
ಯೋಜನೆಯ ಹೊರೆಯನ್ನು ಕೈಗಾರಿಕೆಗಳ ಮೇಲೆ ಹಾಕಿಲ್ಲ ಎಂಬುದನ್ನು ಕೈಗಾರಿಕೋದ್ಯಮಿಗಳಿಗೆ ಮನವರಿಕೆ ಮಾಡಿದ ಮುಖ್ಯಮಂತ್ರಿ, ಉದ್ಯಮಗಳ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ವಿದ್ಯುತ್ ದರ ಹೆಚ್ಚಳದಿಂದ ಕೈಗಾರಿಕೆಗಳಿಗೆ ಹೊಡೆತ ಬೀಳುತ್ತದೆ. ವಿದ್ಯುತ್ ದರವನ್ನು ಶೇ.9 ರಿಂದ 3ಕ್ಕೆ ಇಳಿಸಬೇಕು ಎಂದು ಉದ್ಯಮಿಗಳು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಆರ್ಥಿಕ, ಇಂಧನ ಇಲಾಖೆ, ಖಾಸಿಯಾ ಹಾಗೂ ಎಫ್ ಕೆಸಿಸಿಐ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.