ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ ರೂಪಿಸಲು ವಿಪಕ್ಷಗಳು ಇಂದು ಬಿಹಾರದ ಪಾಟ್ನಾದಲ್ಲಿ ಸಭೆ ನಡೆಸಿವೆ. ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಎನ್ಸಿಪಿ ಸೇರಿದಂತೆ 16 ಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಂಡಿತ್ತು.
ಇತ್ತ ವಿಪಕ್ಷಗಳು ಹೇಗೆ ಬಿಜೆಪಿಯನ್ನು ಕಟ್ಟಿಹಾಕುವುದು ಎಂದು ಚರ್ಚಿಸುತ್ತಿದ್ದರೆ ,ಅತ್ತ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ರಾಹುಲ್ ಗಾಂಧಿ ಮದುವೆ ಕುರಿತು ಯೋಚಿಸಿದ್ದಾರೆ .
ಹೌದು, ವಿಪಕ್ಷಗಳ ಮೈತ್ರಿ ಸಭೆಯಲ್ಲಿ ಲಾಲು ಪ್ರಸಾದ್ ಯಾದವ್ ಹಲವು ವಿಚಾರಗಳನ್ನು ಮುಂದಿಟ್ಟು ಚರ್ಚೆ ನಡೆಸುತ್ತಾ ರಾಹುಲ್ ಗಾಂಧಿ ಮದುವೆ ಕುರಿತು ಮಾತನಾಡಿದ್ದಾರೆ.
ಈ ಹಿಂದೆ ರಾಹುಲ್ ಗಾಂಧಿ ನನ್ನ ಮಾತು ಕೇಳುತ್ತಿರಲಿಲ್ಲ. ನನ್ನ ಮಾತು ಕೇಳಿದ್ದರೆ ಇಷ್ಟೊತ್ತಿಗೆ ರಾಹುಲ್ ಗಾಂಧಿಗೆ ಮದುವೆಯಾಗಿರುತ್ತಿತ್ತು. ಆದರೆ ಇನ್ನೂ ಕಾಲ ಮಿಂಚಿಲ್ಲ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. ನನ್ನ ಮಾತು ಕೇಳಿ, ಶೀಘ್ರದಲ್ಲೇ ಮದುವೆಯಾಗಿ ಎಂದು ರಾಹುಲ್ ಗಾಂಧಿಗೆ ಸೂಚಿಸಿದ್ದಾರೆ. ಇದೇ ವೇಳೆ ನಿಮ್ಮ ತಾಯಿ ಹಲವು ಬಾರಿ ಈ ಕುರಿತು ಹೇಳಿದ್ದಾರೆ. ಮದುವೆ ಕುರಿತು ಮನಸ್ಸು ಮಾಡಿ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ಮಾತಿಗೆರಾಹುಲ್ ಗಾಂಧಿ ನಕ್ಕಿದ್ದಾರೆ. ಮದುವೆ ಮಾತಿನಿಂದ ವಿಪಕ್ಷಗಳ ನಾಯಕರು ನಗೆಗಡಲಲ್ಲಿ ತೇಲಾಡಿದ್ದಾರೆ. ಲಾಲು ಯಾದವ್ ಮಾತಿಗೆ ಧನಿಗೂಡಿಸಿದ್ದಾರೆ. ಇದೇ ವೇಳೆ ಹಲವರು ಇದೇ ಸಲಹೆಯನ್ನು ನೀಡಿದ್ದಾರೆ.