VIARL VIDEO | ಕಿಡ್ನ್ಯಾಪ್ ಆಗಬೇಕಿದ್ದ ಬಾಲಕಿಯನ್ನು ಬಚಾವ್ ಮಾಡಿದ ‘ಹೀರೋ ಲೇಡಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ, ಕಿಡ್ನಾಪ್ ಆಗಬೇಕಿದ್ದ ಬಾಲಕಿಯನ್ನು ಹೇಗೆ ಈ ಮಹಿಳೆ ಬಚಾವ್ ಮಾಡಿದ್ದಾರೆ ಅನ್ನೋ ವಿಡಿಯೋ ಇದಾಗಿದೆ.

ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲು ನಡೆಯುವ ವಿಷಯಗಳ ಬಗ್ಗೆ ಗಮನ ಹರಿಸುತ್ತಾ ಇದ್ದರೆ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು ಎನ್ನುವುದಕ್ಕೆ ಈ ವಿಡಿಯೋ ನಿದರ್ಶನವಾಗಿದೆ.

ಬಾಲಕಿಯೊಬ್ಬಳು ಅಂಗಡಿಗೆ ಐಸ್‌ಕ್ರೀಂ ಕೊಳ್ಳೋದಕ್ಕೆ ಬರ‍್ತಾಳೆ. ಅಂಗಡಿಯ ಓನರ್ ಮಹಿಳೆ ಐಸ್‌ಕ್ರೀಂ ಕೊಟ್ಟು ಹಣ ಪಡೆಯುತ್ತಾಳೆ, ಅದಕ್ಕೆ ಚಿಲ್ಲರೆ ತೆಗೆದುಕೊಂಡು ಬರೋದಕ್ಕೆ ಒಳಗೆ ಹೋಗುತ್ತಾಳೆ. ಈ ವೇಳೆ ಅಂಗಡಿ ಪಕ್ಕದಲ್ಲಿಯೇ ವ್ಯಕ್ತಿಯೊಬ್ಬ ಸುಮಾರು ಹೊತ್ತಿನಿಂದ ಫೋನ್‌ನಲ್ಲಿ ಮಾತನಾಡಿಕೊಂಡು ನಿಂತಿದ್ದನ್ನು ಗಮನಿಸುತ್ತಾಳೆ. ಆತ ಅನುಮಾನಾಸ್ಪದವಾಗಿ ಕಾಣುತ್ತಾನೆ. ಬಾಲಕಿಗೆ ಹೈ ಹೇಳುತ್ತಾನೆ, ಬಾಲಕಿ ಕೂಡ ಹೈ ಎಂದು ಸುಮ್ಮನಾಗುತ್ತಾಳೆ.

ಚಿಲ್ಲರೆ ಕೊಟ್ಟ ನಂತರ ಬಾಲಕಿ ಮನೆಗೆ ಹೊರಡ್ತಾಳೆ, ಈ ವೇಳೆ ಫೋನ್‌ನಲ್ಲಿ ಮಾತನಾಡುವಾತ ಆಕೆಯ ಹಿಂದೆಯೇ ಬರುತ್ತಾನೆ. ಅಂಗಡಿಯ ಮುಂದೆಯೇ ಕಾರ್‌ಒಂದನ್ನು ಕಿಡ್ನಾಪರ‍್ಸ್ ನಿಲ್ಲಿಸಿಕೊಂಡಿರುತ್ತಾರೆ. ಕಾರ್‌ನ ಡೋರ್ ಓಪನ್ ಆಗಿಯೇ ಇರುತ್ತದೆ. ಬಾಲಕಿ ಕಾರ್ ಡೋರ್ ಬಳಿ ಪಾಸ್ ಆದ ತಕ್ಷಣ ಆಕೆಯನ್ನು ಒಳಗೆ ದಬ್ಬಿ ಕುಳಿತುಕೊಳ್ಳೋದು ಕಿಡ್ನ್ಯಾಪರ್ ಪ್ಲ್ಯಾನ್.

ಆದರೆ ಮಹಿಳೆ ಕ್ಷಣಾರ್ಧದಲ್ಲಿ ಈ ಪ್ಲ್ಯಾನ್ ಅರಿತುಕೊಂಡು ಬಾಲಕಿ ಅವರ ಕಾರ್ ಬಳಿ ಪಾಸ್ ಆಗುವಾಗ ತಾನೇ ಓಡಿಹೋಗಿ ಆಕೆಯ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿ, ಮನೆಯ ಹತ್ತಿರ ಬಿಟ್ಟು ಬರುತ್ತಾಳೆ. ನಂತರ ಕಾರ್ ತಿರುಗಿಸಿಕೊಂಡು ಕಿಡ್ನ್ಯಾಪರ‍್ಸ್ ಪರಾರಿಯಾಗುತ್ತಾರೆ. ತಕ್ಷಣವೇ ಫೋನ್‌ನಲ್ಲಿ ಕಾರ್ ಫೋಟೊವನ್ನು ಆಕೆ ತೆಗೆದುಕೊಂಡು ಪೊಲೀಸರಿಗೆ ರವಾನಿಸುತ್ತಾಳೆ.

ಮಹಿಳೆಯ ಸಮಯಪ್ರಜ್ಞೆ ಹಾಗೂ ಸೂಕ್ಷ್ಮ ಗ್ರಹಿಕೆಯಿಂದ ಬಾಲಕಿಯ ಪ್ರಾಣ ಉಳಿದಿದೆ. ಇಂಥ ಜಾಗೃತಿ ಎಲ್ಲರಲ್ಲೂ ಬಂದರೆ ಅದೆಷ್ಟು ಪ್ರಾಣಗಳು ಉಳಿಯುತ್ತವೋ ಏನೋ..

https://twitter.com/Enezator/status/1672181802528563200?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!